ಸೀನ್ ಕೇರ್ನ್‍ಕ್ರಾಸ್ | Photo Credit : x 

ವಾಶಿಂಗ್ಟನ್, ನ.20: ದೇಶಾದ್ಯಂತ ಉಂಟಾದ ಪ್ರಮುಖ ತಾಂತ್ರಿಕ ಸ್ಥಗಿತಗಳು ಮತ್ತು ಕೃತಕ ಬುದ್ಧಿಮತ್ತೆ (AI) ಸಂಬಂಧಿತ ಬೆದರಿಕೆಗಳ ಕುರಿತು ಹೆಚ್ಚುತ್ತಿರುವ ಆತಂಕಗಳ ನಡುವೆಯೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಷ್ಟ್ರೀಯ ಸೈಬರ್ ನಿರ್ದೇಶಕ ಸೀನ್ ಕೇರ್ನ್ಕ್ರಾಸ್ ಅವರನ್ನು ಹುದ್ದೆಯಿಂದ ವಜಾಗೊಳಿಸಿದ್ದಾರೆ ಎಂದು ಶ್ವೇತಭವನದ ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ವರದಿ ಮಾಡಿದೆ.

ಕೇರ್ನ್ಕ್ರಾಸ್ ಅವರಿಗೆ ಈ ಹುದ್ದೆಯನ್ನು ನಿರ್ವಹಿಸಲು ಅಗತ್ಯವಿರುವ ಅರ್ಹತೆಗಳ ಕೊರತೆಯಿತ್ತು. ಅಮೆರಿಕದ ರಕ್ಷಣಾ ಇಲಾಖೆಯ ಪ್ರಸ್ತುತ ಮುಖ್ಯ ಮಾಹಿತಿ ಅಧಿಕಾರಿಯಾಗಿರುವ ಕಿರ್ಸ್ಟನ್ ಡೇವಿಸ್ ಅವರು ಹಂಗಾಮಿಯಾಗಿ ಕೇರ್ನ್ಕ್ರಾಸ್ ಅವರ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದಾರೆ. ಡೇವಿಸ್ ಅವರು ಹೆಚ್ಚು ಸೂಕ್ತವಾದ ಅರ್ಹತೆಗಳನ್ನು ಹೊಂದಿದ್ದಾರೆ ಮತ್ತು ಸಂಸತ್ತಿನ ಅನುಮೋದನೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚಿನ ದಿನಗಳಲ್ಲಿ ಅಮೆರಿಕದಾದ್ಯಂತ ಸಂಭವಿಸಿದ ಪ್ರಮುಖ ತಾಂತ್ರಿಕ ಸ್ಥಗಿತಗಳು ಅಸಂಖ್ಯಾತ ಬಳಕೆದಾರರ ಪ್ರಯಾಣ, ಸಂವಹನ ಮತ್ತು ಇ-ಕಾಮರ್ಸ್ ಸೇವೆಗಳಿಗೆ ಅಡ್ಡಿಪಡಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೃಷ್ಣ ಮೂರ್ತಿ , ವಾರ್ತಾಭಾರತಿ

contributor