×
Ad

ಮಧ್ಯಂತರ ಚುನಾವಣೆಯಲ್ಲಿ ಸೋತರೆ ನನ್ನ ಮೇಲೆ ವಾಗ್ದಂಡನೆ ಖಚಿತ: ಪಕ್ಷದ ಸಂಸದರ ಸಭೆಯಲ್ಲಿ ಟ್ರಂಪ್ ಹೇಳಿಕೆ

Update: 2026-01-07 17:51 IST

ಡೊನಾಲ್ಡ್ ಟ್ರಂಪ್ (File Photo: PTI)

ವಾಷಿಂಗ್ಟನ್: 2026ರ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷ ಗೆಲುವು ಸಾಧಿಸದಿದ್ದರೆ, ಡೆಮೋಕ್ರಾಟ್‌ಗಳು ನನ್ನ ವಿರುದ್ಧ ವಾಗ್ದಂಡನೆ (impeachment) ಪ್ರಕ್ರಿಯೆ ಆರಂಭಿಸುವುದು ಖಚಿತ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಮಂಗಳವಾರ ವಾಷಿಂಗ್ಟನ್‌ನಲ್ಲಿ ಹೌಸ್ ರಿಪಬ್ಲಿಕನ್ ಸಂಸದರ ಸಭೆಯಲ್ಲಿ ಮಾತನಾಡಿದ ಅವರು, “ಮಧ್ಯಂತರ ಚುನಾವಣೆಯಲ್ಲಿ ಗೆಲ್ಲುವುದು ಅನಿವಾರ್ಯ. ನಾವು ಸೋತರೆ, ಅವರು ನನ್ನನ್ನು ವಾಗ್ದಂಡನೆಗೆ ಒಳಪಡಿಸಲು ಯಾವುದಾದರೂ ಕಾರಣವನ್ನು ಕಂಡುಕೊಳ್ಳುತ್ತಾರೆ. ನನ್ನ ವಿರುದ್ಧ ಕ್ರಮ ಕೈಗೊಳ್ಳುವುದು ಖಚಿತವಾಗುತ್ತದೆ,” ಎಂದು ಎಚ್ಚರಿಸಿದರು.

ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಯಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ ನ ಎಲ್ಲಾ ಸ್ಥಾನಗಳು ಹಾಗೂ ಸೆನೆಟ್‌ ನ ಮೂರನೇ ಒಂದು ಭಾಗದಷ್ಟು ಸ್ಥಾನಗಳಿಗೆ ಮತದಾನ ನಡೆಯಲಿದೆ. ಈ ಚುನಾವಣೆಯಲ್ಲಿ ಟ್ರಂಪ್ ಆಡಳಿತದ ಕಾರ್ಯಸೂಚಿಯೇ ಪ್ರಮುಖ ವಿಚಾರವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News