×
Ad

Minneapolis | ಕರ್ತವ್ಯಕ್ಕೆ ಅಡ್ಡಿ ಆರೋಪ: ಐಸಿಇ ಅಧಿಕಾರಿಗಳಿಂದ ಗುಂಡಿಕ್ಕಿ ಮಹಿಳೆಯ ಹತ್ಯೆ

Update: 2026-01-08 08:55 IST

Minneapolis : ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಅಮೆರಿಕದ ಇಮಿಗ್ರೇಶನ್ ಅಂಡ್ ಕಸ್ಟಮ್ಸ್ ಎನ್‍ಫೋರ್ಸ್‍ಮೆಂಟ್ ಅಧಿಕಾರಿಗಳು ಬುಧವಾರ ಮಹಿಳೆಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅಮೆರಿಕ ಆಡಳಿತ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಮಹಿಳೆ ದಂಗೆಗೆ ಕುಮ್ಮಕ್ಕು ನೀಡುತ್ತಿದ್ದರು. ಕಾನೂನು ಜಾರಿ ಅಧಿಕಾರಿಗಳ ಮೇಲೆ ವಾಹನವನ್ನು ಚಲಾಯಿಸಲು ಪ್ರಯತ್ನಿಸಿದರು ಎಂದು ಹೇಳಿಕೊಂಡಿದೆ.

"ಇಂದು ಐಇಸಿ ಅಧಿಕಾರಿಗಳು Minneapolisನಲ್ಲಿ ಗುರಿನಿರ್ದೇಶಿತ ಕಾರ್ಯಾಚರಣೆ ನಡೆಸುತ್ತಿದ್ದಾಗ, ಐಸಿಇ ಅಧಿಕಾರಿಗಳನ್ನು ತಡೆಯುವ ಪ್ರಯತ್ನವನ್ನು ಗಲಭೆಕೋರರು ಮಾಡಿದರು. ಶಸ್ತ್ರಸಜ್ಜಿತ ವಾಹನದಲ್ಲಿದ್ದ ಮಹಿಳೆ ನಮ್ಮ ಕಾನೂನು ಜಾರಿ ಅಧಿಕಾರಿಗಳ ಮೇಲೆ ವಾಹನ ಚಲಾಯಿಸಿ ಅವರನ್ನು ಕೊಲ್ಲುವ ಪ್ರಯತ್ನ ಮಾಡಿದರು. ಇದು ದೇಶೀಯ ಭಯೋತ್ಪಾದನೆಯ ಕ್ರಮ" ಎಂದು ಡಿಎಚ್‍ಎಸ್ ವಕ್ತಾರ ಟ್ರಿಸಿಯಾ ಮೆಕ್‍ಲಾಗ್ಲಿನ್ ಹೇಳಿದ್ದಾರೆ.

"ತಮ್ಮ ಹಾಗೂ ಸಹ ಕಾನೂನು ಜಾರಿ ಅಧಿಕಾರಿಗಳ ಪ್ರಾಣಭಯದಿಂದ ಹಾಗೂ ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಐಸಿಇ ಅಧಿಕಾರಿಯೊಬ್ಬರು, ಆತ್ಮರಕ್ಷಣೆಗಾಗಿ ಗುಂಡುಹಾರಿಸಿದರು. ತಮಗೆ ನೀಡಿದ ತರಬೇತಿಯ ಪ್ರಯೋಜನ ಪಡೆದು ತಮ್ಮನ್ನು ರಕ್ಷಿಸಿಕೊಳ್ಳುವ ಜತೆಗೆ ಸಹ ಅಧಿಕಾರಿಗಳನ್ನೂ ರಕ್ಷಿಸಿದರು. ಇದು ದಾಳಿಕೋರರನ್ನು ಬಡಿದು ಆಕೆ ಮೃತಪಟ್ಟರು. ಗಾಯಗೊಂಡಿರುವ ಐಸಿಇ ಅಧಿಕಾರಿ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ" ಎಂದು ಅಧಿಕೃತ ಹೇಳಿಕೆ ವಿವರಿಸಿದೆ.

ಮಿನ್ನೆಸೋಟದಲ್ಲಿ ಸೋಮಾಲಿಯಾ ವ್ಯಕ್ತಿಗಳ ಕಲ್ಯಾಣ ಹಗರಣದ ಹಿನ್ನೆಲೆಯಲ್ಲಿ ಅಕ್ರಮ ವಲಸಿಗರ ಮೇಲೆ ದೊಡ್ಡ ಕಾರ್ಯಾಚರಣೆಗೆ ಮುಂದಾಗಿರುವ ಟ್ರಂಪ್ ಆಡಳಿತ ಬುಧವಾರ ನೂರಾರು ಮಂದಿ ಭದ್ರತಾ ಸಿಬ್ಬಂದಿಯನ್ನು ಈ ಪ್ರದೇಶದಲ್ಲಿ ನಿಯೋಜಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News