ಗಾಝಾದ ರಾಕೆಟ್ ಉಡಾವಣಾ ಸ್ಥಳದ ಮೇಲೆ ಇಸ್ರೇಲ್ ದಾಳಿ
Update: 2026-01-08 22:51 IST
Photo Credit : aljazeera.com
ಗಾಝಾ, ಜ.8: ಗಾಝಾ ನಗರದ ಬಳಿ ರಾಕೆಟ್ ಉಡಾವಣಾ ತಾಣದ ಮೇಲೆ ಉದ್ದೇಶಿತ ದಾಳಿಯನ್ನು ನಡೆಸಿರುವುದಾಗಿ ಇಸ್ರೇಲ್ ಮಿಲಿಟರಿ ಗುರುವಾರ ಹೇಳಿದೆ.
ಇಸ್ರೇಲ್ ಭೂಪ್ರದೇಶದತ್ತ ರಾಕೆಟ್ ಪ್ರಯೋಗಿಸುವ ಪ್ರಯತ್ನ ನಡೆಯುತ್ತಿರುವ ನಿಖರ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಿ ಪ್ರಯತ್ನ ವಿಫಲಗೊಳಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.