ಸಾಂದರ್ಭಿಕ ಚಿತ್ರ(AI)

ವಾಶಿಂಗ್ಟನ್: ನಕಲಿ ಒಜೆಂಪಿಕ್ ಔಷಧವನ್ನು ಅಕ್ರಮವಾಗಿ ಅಮೆರಿಕಕ್ಕೆ ತಂದು ಮಾರಾಟ ಮಾಡಿದ ಆರೋಪದ ಮೇಲೆ ಇಬ್ಬರು ಭಾರತೀಯ ಪ್ರಜೆಗಳ ವಿರುದ್ಧ ಅಮೆರಿಕದ ಫೆಡರಲ್ ಗ್ರ್ಯಾಂಡ್ ಜ್ಯೂರಿ ದೋಷಾರೋಪಣೆ ಹೊರಿಸಿದೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಮಂಗಳವಾರ ತಿಳಿಸಿದೆ.

ಆರೋಪಿಗಳನ್ನು 33 ವರ್ಷದ ಸ್ವಪ್ನದೀಪ್ ರಾಯ್ ಮತ್ತು 37 ವರ್ಷದ ವಿಕಿ ರಾಮಂಚ ಎಂದು ಗುರುತಿಸಲಾಗಿದೆ. ಇವರು ಚೀನಾದ ಅನಧಿಕೃತ ಮೂಲಗಳಿಂದ ನಕಲಿ ಒಜೆಂಪಿಕ್ ಪಡೆದು, ಅದನ್ನು ಅಮೆರಿಕದ ವಿತರಕರಿಗೆ ಭಾರಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ರಾಯ್ ಅವರನ್ನು ಇಟಲಿಯಿಂದ ಅಮೆರಿಕಕ್ಕೆ ಹಸ್ತಾಂತರಿಸಲಾಗಿದ್ದು, ಆರಂಭಿಕ ವಿಚಾರಣೆ ವೇಳೆ ಅವರು ತಾವು ನಿರಪರಾಧಿ ಎಂದು ಹೇಳಿಕೊಂಡಿದ್ದಾರೆ. ಕೋರ್ಟ್ ದಾಖಲೆಗಳ ಪ್ರಕಾರ, ಈ ಯೋಜಿತ ಜಾಲವು ಕನಿಷ್ಠ ಜುಲೈ 2023ರಿಂದ ಎಪ್ರಿಲ್ 2024ರವರೆಗೆ ಸಕ್ರಿಯವಾಗಿತ್ತು. ಆರೋಪ ಸಾಬೀತಾದರೆ, ಪ್ರತಿಯೊಬ್ಬ ಆರೋಪಿಯೂ ಗರಿಷ್ಠ 71 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ. ತೂಕ ಇಳಿಸಿಕೊಳ್ಳಲು ಸಹ ವ್ಯಾಪಕವಾಗಿ ಬಳಕೆಯಾಗುವ ಈ ಜನಪ್ರಿಯ ಔಷಧಿಗೆ ಅಮೆರಿಕದಲ್ಲಿ ರೋಗಿಗಳು ತಿಂಗಳಿಗೆ ನೂರಾರು ಡಾಲರ್‌ಗಳನ್ನು ವೆಚ್ಚ ಮಾಡಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor