×
Ad

ಇಮ್ರಾನ್ ಖಾನ್ ಕಸ್ಟಡಿ: ಅವಧಿ 2 ವಾರ ವಿಸ್ತರಣೆ

Update: 2023-08-30 23:06 IST

Photo: ANI

ಇಸ್ಲಾಮಾಬಾದ್: ಸೈಫರ್ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ಗೆ ವಿಧಿಸಲಾಗಿದ್ದ ಜೈಲು ಕಸ್ಟಡಿ ಅವಧಿಯನ್ನು ಬುಧವಾರ ಪಾಕಿಸ್ತಾನದ ನ್ಯಾಯಾಲಯ 14 ದಿನ ವಿಸ್ತರಿಸಿದೆ.

ತೋಷಖಾನ ಪ್ರಕರಣದಲ್ಲಿ ಬಂಧನದಲ್ಲಿದ್ದ ಇಮ್ರಾನ್ ರನ್ನು ಜಾಮೀನು ಮೇಲೆ ಬಿಡುಗಡೆಗೊಳಿಸಲು ಇಸ್ಲಮಾಬಾದ್ ಹೈಕೋರ್ಟ್ ಮಂಗಳವಾರ ಆದೇಶಿಸಿತ್ತು. ಆದರೆ ಸೈಫರ್ ಪ್ರಕರಣದಲ್ಲಿ ಆರೋಪಿಯಾಗಿರುವ ಇಮ್ರಾನ್ರನ್ನು ಜೈಲಿನಿಂದ ಬಿಡುಗಡೆಗೊಳಿಸದೆ ಜೈಲು ಕಸ್ಟಡಿಗೆ ವಹಿಸಲಾಗಿತ್ತು. ಬುಧವಾರ ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ ಕಸ್ಟಡಿ ಅವಧಿಯನ್ನು ಸೆಪ್ಟಂಬರ್ 13ರವರೆಗೆ ವಿಸ್ತರಿಸಲಾಗಿದೆ. ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿದ್ದು ಸೆಪ್ಟಂಬರ್ 2ರಂದು ಅರ್ಜಿಯ ವಿಚಾರಣೆ ನಡೆಸಲಾಗುವುದು ಎಂದು ಇಮ್ರಾನ್ ಪರ ವಕೀಲರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News