×
Ad

ಹಮಾಸ್ ಪರ ಪ್ರಚಾರದ ಆರೋಪ : ಅಮೆರಿಕದಲ್ಲಿ ಭಾರತೀಯ ಸಂಶೋಧಕನ ಬಂಧನ, ಗಡೀಪಾರು ಭೀತಿ

Update: 2025-03-20 11:42 IST

ಬದರ್ ಖಾನ್ ಸೂರಿ (Photo credit: LinkedIn)

ವಾಶಿಂಗ್ಟನ್ : ಅಮೆರಿಕದ ಜಾರ್ಜ್‌ಟೌನ್‌ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿರುವ ಭಾರತೀಯ ಸಂಶೋಧಕನನ್ನು ಹಮಾಸ್ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅಮೆರಿಕದ ಅಧಿಕಾರಿಗಳು ಬಂಧಿಸಿದ್ದಾರೆ. ಇದಲ್ಲದೆ ಅವರು ಅಮೆರಿಕದಿಂದ ಗಡೀಪಾರು ಭೀತಿಯನ್ನು ಎದುರಿಸುತ್ತಿದ್ದಾರೆ.

ಬದರ್ ಖಾನ್ ಸೂರಿ ಅವರನ್ನು ಸೋಮವಾರ ರಾತ್ರಿ ವರ್ಜೀನಿಯಾದ ಅವರ ನಿವಾಸದ ಬಳಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಜಾರ್ಜ್‌ಟೌನ್‌ ವಿಶ್ವವಿದ್ಯಾನಿಲಯದ ಸಂಶೋಧಕರಾಗಿರುವ ಬಾದರ್ ಖಾನ್ ಸೂರಿ ಅವರು ಹಮಾಸ್ ಪರ ಪ್ರಚಾರವನ್ನು ಹರಡುತ್ತಿದ್ದಾರೆ ಮತ್ತು ಯೆಹೂದಿಗಳ ವಿರೋಧಿತ್ವವನ್ನು ಉತ್ತೇಜಿಸುತ್ತಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಆರೋಪಿಸಿದರು.

ಹೋಮ್‌ಲ್ಯಾಂಡ್‌ ಸೆಕ್ಯುರಿಟಿ ಇಲಾಖೆಯ ಸಹಾಯಕ ಕಾರ್ಯದರ್ಶಿ ಟ್ರಿಸಿಯಾ ಮ್ಯಾಕ್ಲಾಫ್ಲಿನ್ ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ʼಬದರ್ ಖಾನ್ ಸೂರಿ ಜಾರ್ಜ್‌ಟೌನ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದು, ಹಮಾಸ್ ಪರ ಪ್ರಚಾರ ಮಾಡುತ್ತಿದ್ದ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯೆಹೂದಿಗಳ ವಿರೋಧಿತ್ವವನ್ನು ಉತ್ತೇಜಿಸುತ್ತಿದ್ದ. ಸೂರಿ ಹಮಾಸ್‌ನ ಹಿರಿಯ ಸಲಹೆಗಾರರಾರು ಮತ್ತು ತಿಳಿದಿರುವ ಅಥವಾ ಶಂಕಿತರ ಜೊತೆ ನಿಕಟ ಸಂಪರ್ಕವನ್ನು ಹೊಂದಿದ್ದಾನೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸೂರಿಯ ಚಟುವಟಿಕೆಗಳು ಮತ್ತು ಉಪಸ್ಥಿತಿಯು ಅವರನ್ನು INA ಸೆಕ್ಷನ್ 237(a)(4)(C)(i) ಅಡಿಯಲ್ಲಿ ಗಡೀಪಾರು ಮಾಡುವಂತೆ ಮಾಡುತ್ತದೆʼ ಎಂದು ಹೇಳಿದರು.

ಬದರ್ ಖಾನ್ ಸೂರಿ 2020ರಲ್ಲಿ ದಿಲ್ಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ನೆಲ್ಸನ್ ಮಂಡೇಲಾ ಸೆಂಟರ್ ಫಾರ್ ಪೀಸ್ ಅಂಡ್ ಕಾನ್ಫ್ಲಿಕ್ಟ್ ರೆಸಲ್ಯೂಶನ್ ನಲ್ಲಿʼ ಶಾಂತಿ ಮತ್ತು ಸಂಘರ್ಷದ ಅಧ್ಯಯನಗಳ ಕುರಿತು ಪಿಹೆಚ್ಡಿಯನ್ನು ಪೂರ್ಣಗೊಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News