×
Ad

ಅಮೆರಿಕ | ಭಾರತೀಯ ವಿದ್ಯಾರ್ಥಿಗೆ ದೌರ್ಜನ್ಯವೆಸಗಿ ಗಡೀಪಾರು!

Update: 2025-06-09 16:45 IST

PC : X/@SONOFINDIA

ವಾಶಿಂಗ್ಟನ್ : ಅಮೆರಿಕದ ನ್ಯೂವಾರ್ಕ್ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿದ್ಯಾರ್ಥಿಯೋರ್ವನನ್ನು ಗಡೀಪಾರು ಮಾಡುವ ಮೊದಲು ಕೈಕೋಳ ಹಾಕಿ ನೆಲಕ್ಕೆ ಬಿಗಿಯಾಗಿ ಹಿಡಿದು ದೌರ್ಜನ್ಯವೆಸಗುವ ವೀಡಿಯೊ ವೈರಲ್ ಆಗಿದೆ.

ಈ ವೀಡಿಯೊವನ್ನು ಭಾರತೀಯ ಅಮೆರಿಕನ್ ಉದ್ಯಮಿ ಕುನಾಲ್ ಜೈನ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆ ಯುವಕ ಅಳುತ್ತಿದ್ದ ಮತ್ತು ಅಧಿಕಾರಿಗಳು ಅವನನ್ನು ಅಪರಾಧಿಯಂತೆ ನಡೆಸಿಕೊಂಡರು ಎಂದು ಆರೋಪಿಸಿದ್ದಾರೆ.

ಘಟನೆಯ ಬಗ್ಗೆ ತನಿಖೆ ನಡೆಸಿ ವಿದ್ಯಾರ್ಥಿಗೆ ಸಹಾಯ ಮಾಡುವಂತೆ ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಜೈನ್ ಆಗ್ರಹಿಸಿದ್ದಾರೆ.

ʼನಿನ್ನೆ ರಾತ್ರಿ ನ್ಯೂವಾರ್ಕ್ ವಿಮಾನ ನಿಲ್ದಾಣದಲ್ಲಿ ಓರ್ವ ಯುವ ಭಾರತೀಯ ವಿದ್ಯಾರ್ಥಿಯನ್ನು ಗಡೀಪಾರು ಮಾಡುವುದನ್ನು ನಾನು ನೋಡಿದೆ. ಕೈಕೋಳ ಹಾಕಿ ಅಪರಾಧಿಯಂತೆ ಆತನನ್ನು ನಡೆಸಿಕೊಳ್ಳಲಾಗಿದೆ. ಆತ ಅಳುತ್ತಿದ್ದʼ ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.

ಅವನು ತನ್ನ ಕನಸುನ್ನು ಬೆನ್ನಟ್ಟುತ್ತಾ ಬಂದನು ಹೊರತು ಹಾನಿ ಮಾಡಲು ಬಂದಿಲ್ಲ. ಓರ್ವ ಅನಿವಾಸಿ ಭಾರತೀಯನಾಗಿ ನಾನು ಅಸಹಾಯಕನಾದೆ ಮತ್ತು ನನ್ನ ಹೃದಯ ಒಡೆದಂತೆ ಭಾಸವಾಯಿತು. ಇದು ಮಾನವ ದುರಂತ ಎಂದು ಕುನಾಲ್ ಜೈನ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News