×
Ad

ಇಂಗ್ಲೆಂಡ್‌ನಲ್ಲಿ ಭಾರತೀಯ ಮೂಲದ ಯುವತಿ ಮೇಲೆ ಅತ್ಯಾಚಾರ | 'ಜನಾಂಗೀಯ ದಾಳಿʼ ಎಂದು ಪರಿಗಣಿಸಿದ ಪೊಲೀಸರು: ವರದಿ

Update: 2025-10-27 11:27 IST

 ಶಂಕಿತ ಆರೋಪಿ | Photo : NDTV

ಲಂಡನ್ : ವೆಸ್ಟ್ ಮಿಡ್ಲ್ಯಾಂಡ್ಸ್‌ನಲ್ಲಿ ಭಾರತೀಯ ಮೂಲದ 20 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆದಿದೆ. ಮಹಿಳೆಯ ಮೇಲೆ ಆಕೆಯ ಜನಾಂಗೀಯ ಗುರುತಿನ ಕಾರಣದಿಂದಾಗಿ ಈ ಕೃತ್ಯವನ್ನು ಎಸಗಲಾಗಿದೆ ಎಂದು ಪೊಲೀಸರು ತಿಳಿಸಿರುವ ಬಗ್ಗೆ ವರದಿಯಾಗಿದೆ.

ವೆಸ್ಟ್ ಮಿಡ್ಲ್ಯಾಂಡ್ಸ್ ಪೊಲೀಸರು ಶನಿವಾರ ಸಂಜೆ ವಾಲ್ಸಾಲ್‌ನ ಪಾರ್ಕ್ ಹಾಲ್ ಪ್ರದೇಶದಲ್ಲಿ ರಸ್ತೆಯಲ್ಲಿದ್ದ ಆತಂಕಗೊಂಡ ಮಹಿಳೆ ಕುರಿತು ಮಾಹಿತಿ ಪಡೆದ ನಂತರ ಸ್ಥಳಕ್ಕೆ ತೆರಳಿದರು. ಪೊಲೀಸರು ಸಿಸಿಟಿವಿ ದೃಶ್ಯ ಬಿಡುಗಡೆ ಮಾಡಿ ಆರೋಪಿಯ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ವಿನಂತಿಸಿದ್ದಾರೆ. ಇದು ಉಲ್ಬಣಗೊಂಡ ಜನಾಂಗೀಯ ದಾಳಿ ಎಂದು ಪರಿಗಣಿಸಿರುವುದಾಗಿ ತಿಳಿಸಿದ್ದಾರೆ. ಪ್ರಕರಣದ ಆರೋಪಿಯನ್ನು ಪತ್ತೆಹಚ್ಚಲು ತುರ್ತು ತನಿಖೆಯನ್ನು ಆರಂಭಿಸಿದ್ದಾರೆ.

ಇದು ಯುವತಿ ಮೇಲಿನ ಭಯಾನಕ ದಾಳಿಯಾಗಿದ್ದು, ಆರೋಪಿಯನ್ನು ಬಂಧಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ ಎಂದು ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ಡಿಟೆಕ್ಟಿವ್ ಸೂಪರಿಂಟೆಂಡೆಂಟ್(ಡಿಎಸ್) ರೊನಾನ್ ಟೈರರ್ ಹೇಳಿದ್ದಾರೆ.

ಕೋವೆಂಟ್ರಿ ದಕ್ಷಿಣ ಕ್ಷೇತ್ರದ ಸಂಸದೆಯಾದ ಝಾರಾ ಸುಲ್ತಾನಾ ಈ ಘಟನೆಯನ್ನು ಖಂಡಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಶನಿವಾರ ವಾಲ್ಸಾಲ್‌ ನಲ್ಲಿ ಪಂಜಾಬಿ ಮೂಲದ ಮಹಿಳೆಯೊಬ್ಬರು ಜನಾಂಗೀಯ ದಾಳಿಯಲ್ಲಿ ಅತ್ಯಾಚಾರಕ್ಕೊಳಗಾಗಿದ್ದಾರೆ. ಕಳೆದ ತಿಂಗಳು ಓಲ್ಡ್‌ಬರಿಯಲ್ಲಿ ಸಿಖ್ ಮಹಿಳೆ ಮೇಲೂ ಇದೇ ರೀತಿಯ ದಾಳಿ ನಡೆದಿತ್ತು. ಇಂತಹ ಘಟನೆಗಳು ಜನಾಂಗೀಯತೆ ಮತ್ತು ಸ್ತ್ರೀ ದ್ವೇಷ ಹೇಗೆ ಬೆಳೆಯುತ್ತವೆ ಎಂಬುದನ್ನು ತೋರಿಸುತ್ತವೆ. ಈ ಭಯ ಎಷ್ಟು ನಿಜವಾದುದು ಎಂಬುದು ನನಗೆ ಗೊತ್ತಿದೆ. ಜನಾಂಗೀಯತೆ, ಫ್ಯಾಸಿಸಂ ಮತ್ತು ಸ್ತ್ರೀದ್ವೇಷದ ವಿರುದ್ಧ ನಾವು ಒಟ್ಟಾಗಿ ನಿಲ್ಲಬೇಕು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News