×
Ad

Jordan ನ ಪ್ರಿನ್ಸ್ ಹಸನ್ ವಾಯುನೆಲೆಯ ಮೇಲೆ ಇರಾನ್ ನ ಕ್ಷಿಪಣಿ, ಡ್ರೋನ್ ದಾಳಿ

ಅಮೆರಿಕದ ದಾಳಿಗೆ ಪ್ರತೀಕಾರದ ಮೊದಲ ಹಂತ: IRGC ಹೇಳಿಕೆ

Update: 2026-07-13 08:20 IST

ಸಾಂದರ್ಭಿಕ ಚಿತ್ರ | Photo credit : aljazeera

ಟೆಹ್ರಾನ್: ಜೋರ್ಡಾನ್‌ ನಲ್ಲಿರುವ ಪ್ರಿನ್ಸ್ ಹಸನ್ ವಾಯುನೆಲೆ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ದಾಳಿ ನಡೆಸಿರುವುದಾಗಿ ಇರಾನ್‌ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಸೋಮವಾರ ಹೇಳಿಕೊಂಡಿದೆ. ದಾಳಿಯಲ್ಲಿ ಹಲವು ಇಂಧನ ಡಿಪೋಗಳು ಮತ್ತು ಮದ್ದುಗುಂಡು ಸಂಗ್ರಹಣಾ ಸೌಲಭ್ಯಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಅದು ತಿಳಿಸಿದೆ.

ಇರಾನ್‌ನ ಕರಾವಳಿ ಮಿಲಿಟರಿ ನೆಲೆಗಳ ಮೇಲೆ ಅಮೆರಿಕ ನಡೆಸಿದ ದಾಳಿಗೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ. ಇದು ಪ್ರತೀಕಾರದ ಕಾರ್ಯಾಚರಣೆಯ ಮೊದಲ ಹಂತ ಎಂದು IRGC ಹೇಳಿದೆ.

ಇದಕ್ಕೂ ಮುನ್ನ ಹಾರ್ಮುಝ್ ಜಲಸಂಧಿಯಲ್ಲಿ ಎರಡು ಹಡಗುಗಳನ್ನು IRGC ನೌಕಾಪಡೆ ತಡೆಹಿಡಿದಿತ್ತು. ಆ ಹಡಗುಗಳು ತಮ್ಮ ಟ್ರ್ಯಾಕಿಂಗ್ ವ್ಯವಸ್ಥೆಗಳನ್ನು ಸ್ಥಗಿತಗೊಳಿಸಿ ಅಕ್ರಮವಾಗಿ ಸಂಚರಿಸುತ್ತಿದ್ದವು. ಅಲ್ಲದೆ, ಸಮುದ್ರ ಸಂಚಾರದ ಸುರಕ್ಷತೆಗೆ ಅಪಾಯ ಉಂಟುಮಾಡಿದ್ದವು ಎಂದು IRGC ಆರೋಪಿಸಿದೆ.

ಈ ಹಡಗುಗಳನ್ನು ತಡೆಹಿಡಿದ ಕಾರ್ಯಾಚರಣೆಯ ಬಳಿಕವೇ ಅಮೆರಿಕ ಇರಾನ್‌ನ ಕರಾವಳಿ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು IRGC ಹೇಳಿದೆ.

ಪ್ರತೀಕಾರದ ಕಾರ್ಯಾಚರಣೆಗಳು ಮುಂದುವರಿದಿದ್ದು, ಮುಂದಿನ ಹಂತಗಳ ಫಲಿತಾಂಶಗಳನ್ನು ನಂತರದ ಹೇಳಿಕೆಗಳಲ್ಲಿ ಪ್ರಕಟಿಸಲಾಗುವುದು ಎಂದು IRGC ತಿಳಿಸಿದೆ ಎಂದು Aljazeera ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News