ಇರಾನ್ ಜೊತೆಗಿನ ಒಪ್ಪಂದ: ಇಸ್ರೇಲ್ ಪ್ರಧಾನಿ ನೆತನ್ಯಾಹುರನ್ನು ದೂರವಿಟ್ಟ ಟ್ರಂಪ್
ಇಸ್ರೇಲ್ ಪ್ರಧಾನಿ ನೆತನ್ಯಾಹು | Photo Credit : PTI
ವಾಶಿಂಗ್ಟನ್: ಇರಾನ್ ವಿರುದ್ಧ ತನ್ನ ಯೋಜಿತ ದಾಳಿಗಳ್ನು ರದ್ದುಪಡಿಸುವುದಾಗಿ ಹಾಗೂ ಶೀಘ್ರದಲ್ಲೇ ಆ ದೇಶದೊಂದಿಗೆ ಯುದ್ಧವನ್ನು ಅಂತ್ಯಗೊಳಿಸಲು ಒಪ್ಪಂದಕ್ಕೆ ಸಹಿಹಾಕುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಘೋಷಿಸುವ ವಿಚಾರವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಮುಂಚಿತವಾಗಿ ತಿಳಿಸಿರಲಿಲ್ಲ ಎಂದು ಅಮೆರಿಕದ ಸುದ್ದಿ ಪ್ರಕಾಶನ ಸಂಸ್ಥೆ ʼಆಕ್ಸಿಯೋಸ್ʼ ವರದಿ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಇರಾನ್ ಹಾಗೂ ಅಮೆರಿಕ ನಡುವೆ ನಡೆಯುತ್ತಿರುವ ಮಾತುಕತೆಯ ವಿಚಾರದಲ್ಲಿ ನೆತನ್ಯಾಹು ಅವರನ್ನು ಕತ್ತಲಲ್ಲಿರಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಇರಾನ್ ಯುದ್ಧ ಮುಂದುವರಿದಂಮತೆ ಅಮೆರಿಕ ಹಾಗೂ ಇಸ್ರೇಲ್‌ನ ಹಿತಾಸಕ್ತಿಗಳು ವಿಭಿನ್ನವಾಗತೊಡಗಿದ್ದುದೇ ಈ ಇಬ್ಬರು ಸ್ನೇಹಿತರಲ್ಲಿ ಬಿರುಕು ಮೂಡಿದೆ ಎಂದು ವರದಿ ಹೇಳಿದೆ. ನವೆಂಬರ್ ತಿಂಗಳಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಗೆ ಮುನ್ನ ತೈಲ ದರಗಳ ಮೇಲೆ ನಿಯಂತ್ರಣ ಸಾಧಿಸಲು ಟ್ರಂಪ್ ಬಯಸುತ್ತಿದ್ದರೆ, ಈ ವರ್ಷವೇ ಚುನಾವಣೆಯ ಎದುರಿಸಲಿರುವ ಬೆಂಜಮಿನ್ ನೆತನ್ಯಾಹು ಅವರು ಇರಾನ್‌ನಲ್ಲಿ ಆಡಳಿತ ಬದಲಾವಣೆಯನ್ನು ಸಾಧಿಸುವ ಗುರಿಯನ್ನು ಹೊಂದಿದ್ದಾರೆಂದು ವರದಿ ಹೇಳಿದೆ.