ಇರಾನ್ ಮಾಧ್ಯಮದಿಂದ ‘ಸುಳ್ಳು ಒಪ್ಪಂದದ’ ನಿಬಂಧನೆಗಳ ಪ್ರಸಾರ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕೆ
Update: 2026-06-12 21:34 IST
ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್: ಅಮೆರಿಕ ಹಾಗೂ ಇರಾನ್ ಜೊತೆ ಏರ್ಪಟ್ಟಿರುವ ಶಾಂತಿ ಒಪ್ಪಂದದ ನಿಬಂಧನೆಗಳನ್ನು ಇರಾನ್ ಸರಕಾರಿ ಮಾಧ್ಯಮವೊಂದು ಪ್ರಸಾರ ಮಾಡಿದ್ದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರವಾಗಿ ಖಂಡಿಸಿದ್ದಾರೆ. ಯುದ್ಧವನ್ನು ಕೊನೆಗೊಳಿಸಲು ಏರ್ಪಡಿಸಲಾಗುವ ಈ ಒಪ್ಪಂದದ ನಿಬಂಧನೆಗಳುಈ ಮಾಧ್ಯಮವು ಪ್ರಸಾರಮಾಡಿದ ವಿಷಯಗಳನ್ನು ಒಳಗೊಂಡಿಲ್ಲವೆಂದು ಅವರು ಹೇಳಿದ್ದಾರೆ.
‘‘ನಕಲಿ ಸುದ್ದಿ ಮಾಧ್ಯಮ ಸಂಸ್ಥೆಗೆ ಇರಾನ್ ಸೋರಿಕೆ ಮಾಡಿರುವ ಒಪ್ಪಂದದ ನಿಬಂಧನೆಗಳಿಗೂ, ಉಭಯದೇಶಗಳ ನಡುವೆ ಲಿಖಿತ ರೂಪದಲ್ಲಿ ಏರ್ಪಟ್ಟಿರುವ ಒಪ್ಪಂದದ ಜೊತೆ ಯಾವುದೇ ಸಂಬಂಧವಿಲ್ಲ’’ ಎಂದು ಟ್ರಂಪ್ ಟ್ರೂಥ್ ಸೋಶಿಯಲ್ ಜಾಲತಾಣದಲ್ಲಿ ಹೇಳಿದ್ದಾರೆ.