×
Ad

ಹಾರ್ಮುಝ್‌ನಲ್ಲಿ 'ಭಾರತೀಯ' ಹಡಗುಗಳ ಮೇಲೆ ಇರಾನ್ ದಾಳಿ ಯತ್ನ: ಟ್ರಂಪ್ ಆರೋಪ

Update: 2026-06-12 21:01 IST

ಡೊನಾಲ್ಡ್ ಟ್ರಂಪ್ | Photo Credit : PTI 

ವಾಷಿಂಗ್ಟನ್: ಹಾರ್ಮುಝ್‌ನಲ್ಲಿ 'ಭಾರತೀಯ' ಹಡಗುಗಳ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಲು ಯತ್ನಿಸಿದೆ ಎಂದು ಆರೋಪಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, " ಹಾರ್ಮುಝ್ ಜಲಸಂಧಿಯಿಂದ ಹಾದು ಹೋಗುವ ಭಾರತೀಯ ಹಡಗುಗಳ ಮೇಲೆ ಇರಾನ್ ನಡೆಸಿದ ಡ್ರೋನ್ ದಾಳಿ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅಮೆರಿಕದ ಸೇನಾ ಕಾರ್ಯಾಚರಣೆಗಳ ಪರಿಣಾಮವಾಗಿ, ಭಾರತೀಯ ನಾವಿಕರನ್ನು ಹೊಂದಿದ್ದ ಮೂರು ತೈಲ ಟ್ಯಾಂಕರ್‌ಗಳು ಈ ಪ್ರದೇಶದಲ್ಲಿ ಸಿಲುಕಿಕೊಂಡಿವೆ ಎಂದು ವರದಿಯಾಗಿದೆ.

ಪಲೌ ದೇಶದ ಧ್ವಜ ಹೊಂದಿದ್ದ ತೈಲ ಟ್ಯಾಂಕರ್ ‘ಸೆಟಬಲೋ’ ಮೇಲೆ ಅಮೆರಿಕ ಸೇನೆಯು ಒಮಾನ್ ಕೊಲ್ಲಿಯಲ್ಲಿ ದಾಳಿ ನಡೆಸಿತ್ತು. ಆ ನೌಕೆಯಲ್ಲಿ 24 ಭಾರತೀಯರು ಹಾಗೂ ನಾಲ್ವರು ವಿದೇಶಿ ಪ್ರಜೆಗಳು (ಇಬ್ಬರು ಪಾಕಿಸ್ತಾನಿಗಳು, ಒಬ್ಬ ಉಕ್ರೇನಿಯನ್ ಮತ್ತು ಒಬ್ಬ ರಷ್ಯನ್) ಸೇರಿದಂತೆ ಒಟ್ಟು 28 ಸಿಬ್ಬಂದಿ ಇದ್ದರು. ಹಡಗು ಇರಾನ್‌ನಿಂದ ತೈಲ ಸಾಗಿಸುತ್ತಿದ್ದು ತನ್ನ ಸೂಚನೆಗಳನ್ನು ಪಾಲಿಸದ ಕಾರಣಕ್ಕೆ ಅದರ ಮೇಲೆ ದಾಳಿ ಮಾಡಿರುವುದಾಗಿ ಅಮೆರಿಕ ಸೇನೆ ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News