ಭಾರತೀಯರಿಗೆ ವೀಸಾ-ಮುಕ್ತ ಪ್ರವೇಶ ಕೊನೆಗೊಳಿಸಿದ ಇರಾನ್
Update: 2025-11-17 21:36 IST
ಸಾಂದರ್ಭಿಕ ಚಿತ್ರ | Photo Credit : freepik.com
ಟೆಹ್ರಾನ್, ನ.17: ಸಾಮಾನ್ಯ ಪಾಸ್‍ಪೋರ್ಟ್ ಹೊಂದಿರುವ ಭಾರತೀಯ ಪ್ರಜೆಗಳಿಗೆ ತನ್ನ ಏಕಮುಖ ವೀಸಾ ವಿನಾಯಿತಿಯನ್ನು ಅಮಾನುತುಗೊಳಿಸುವುದಾಗಿ ಇರಾನ್ ಘೋಷಿಸಿದೆ.
ನವೆಂಬರ್ 22ರಿಂದ, ಭಾರತೀಯ ಪ್ರಯಾಣಿಕರು ವೀಸಾ ಇಲ್ಲದೆ ದೇಶವನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಮತ್ತು ಪ್ರಯಾಣ ಹಾಗೂ ಪ್ರವೇಶ ಎರಡಕ್ಕೂ ಮುಂಚಿತವಾಗಿ ವೀಸಾ ಪಡೆಯಬೇಕಿದೆ. ಈ ಹಿಂದಿನ ನೀತಿಯು ಕೆಲವು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ವೀಸಾ ಇಲ್ಲದೆಯೇ ಇರಾನ್ ಅನ್ನು ಪ್ರವೇಶಿಸಲು ಭಾರತದ ಪ್ರವಾಸಿಗರಿಗೆ ಅವಕಾಶ ನೀಡಿತ್ತು. ಇದು ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಏಶ್ಯಾದ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ಬಲಪಡಿಸುವ ಇರಾನಿನ ವ್ಯಾಪಕ ಪ್ರಯತ್ನದ ಭಾಗವಾಗಿತ್ತು. ಇದೀಗ ಸಾಮಾನ್ಯ ಪಾಸ್‍ಪೋರ್ಟ್ ಹೊಂದಿರುವ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಪ್ರಯಾಣಿಸುವ ಮೊದಲು ವೀಸಾವನ್ನು ಪಡೆಯುವುದು ಅಗತ್ಯವಾಗಿದೆ.