ಕದನ ವಿರಾಮದ ತಿಳುವಳಿಕಾ ಒಪ್ಪಂದ ಅಮಾನತುಗೊಳಿಸಿದ ಇರಾನ್

Update: 2026-07-18 21:43 IST

ಸಾಂದರ್ಭಿಕ ಚಿತ್ರ | Photo Credit : PTI

ಟೆಹರಾನ್, ಜು.18: ಅಮೆರಿಕವೇ ಮೊದಲು ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿರುವ ಇರಾನ್, ಇಸ್ಲಾಮಾಬಾದ್ ತಿಳುವಳಿಕಾ ಒಪ್ಪಂದದ (ಎಂಒಯು) ಅಡಿಯಲ್ಲಿನ ತನ್ನ ಬದ್ಧತೆಗಳನ್ನು ಅಮಾನತುಗೊಳಿಸುತ್ತಿರುವುದಾಗಿ ಘೋಷಿಸಿದೆ.

ವಾಶಿಂಗ್ಟನ್ ಈ ಒಪ್ಪಂದದ ಅಡಿಯಲ್ಲಿ ತನ್ನ ಬದ್ಧತೆಗಳನ್ನು ಗೌರವಿಸಲು ವಿಫಲವಾದ ಹಿನ್ನೆಲೆಯಲ್ಲಿ, ಟೆಹರಾನ್ ತನ್ನ ಜವಾಬ್ದಾರಿಗಳ ಅನುಷ್ಠಾನವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ಇರಾನ್‍ನ ಉಪ ವಿದೇಶಾಂಗ ಸಚಿವ ಕಾಜೆಮ್ ಘರಿಬಾಬಾದಿ ತಿಳಿಸಿದ್ದಾರೆ.

ಇಸ್ಲಾಮಾಬಾದ್ ತಿಳುವಳಿಕಾ ಒಪ್ಪಂದದ ಚೌಕಟ್ಟಿನೊಳಗಿನ ತನ್ನ ಎಲ್ಲಾ ಬದ್ಧತೆಗಳನ್ನು ಅಮೆರಿಕ ಉಲ್ಲಂಘಿಸಿದೆ ಮತ್ತು ಅಮಾನತುಗೊಳಿಸಿದೆ. ನಾವು ಕೂಡ ನಮ್ಮ ಬದ್ಧತೆಗಳನ್ನು ಅಮಾನತುಗೊಳಿಸಿದ್ದೇವೆ. ನಾವು ಅವುಗಳನ್ನು ಜಾರಿಗೊಳಿಸುತ್ತಿಲ್ಲ ಮತ್ತು ಪ್ರಸ್ತುತ ದೇಶವನ್ನು ರಕ್ಷಿಸುವಲ್ಲಿ ನಿರತರಾಗಿದ್ದೇವೆ' ಎಂದು ಘರಿಬಾಬಾದಿ ಹೇಳಿರುವುದಾಗಿ `ಫಾರ್ಸ್' ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News