ರಶ್ಯದ ಮೇಲೆ ಉಕ್ರೇನ್ ಡ್ರೋನ್ ದಾಳಿ : 7 ಕಾರ್ಮಿಕರು ಮೃತ್ಯು; ತೈಲ ಡಿಪೋದಲ್ಲಿ ಬೆಂಕಿ

Update: 2026-07-18 21:45 IST

Photo Credit : reuters.com

ಮಾಸ್ಕೊ, ಜು.18: ಉಕ್ರೇನ್ ನಡೆಸಿದ ಸರಣಿ ಡ್ರೋನ್ ದಾಳಿಯಲ್ಲಿ ರಶ್ಯದ ಏಳು ಕಾರ್ಮಿಕರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮಾಸ್ಕೊ ವಲಯದ ತೈಲ ಡಿಪೋವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾದೇಶಿಕ ಗವರ್ನರ್ ತಿಳಿಸಿದ್ದಾರೆ.

ಮಾಸ್ಕೊದ ಆಗ್ನೇಯದಲ್ಲಿರುವ ತಾಂಬೋವ್ ಪ್ರದೇಶದ ಕೊಟೊವ್ಸ್ಕ್ ನಗರದಲ್ಲಿ ಗೋದಾಮಿಗೆ ಉಕ್ರೇನ್ ಡ್ರೋನ್‍ಗಳು ಅಪ್ಪಳಿಸಿದ ಪರಿಣಾಮ 7 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು ಸುಮಾರು 50 ಜನರು ಗಾಯಗೊಂಡಿದ್ದಾರೆ. ಮಾಸ್ಕೊ ಪ್ರದೇಶದ ನಾಗಿನ್ಸ್ಕ್ ನಗರದಲ್ಲಿ, ಪತನಗೊಂಡ ಡ್ರೋನ್‍ನ ಅವಶೇಷಗಳಿಂದಾಗಿ ತೈಲ ಡಿಪೋವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಬ್ಬರು ಗಾಯಗೊಂಡಿದ್ದಾರೆ ಮತ್ತು ಹತ್ತಿರದ ಹೆರಿಗೆ ಆಸ್ಪತ್ರೆಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News