ಅಮೆರಿಕದ ದಾಳಿಗಳು ಮುಂದುವರಿದರೆ ಆಕ್ರಮಣಕಾರಿ ಕಾರ್ಯಾಚರಣೆ ನಡೆಸಲಾಗುವುದು : ಇರಾನ್ ಎಚ್ಚರಿಕೆ

Update: 2026-07-18 19:50 IST

 ಮೊಹ್ಸೆನ್ ರೆಜಾಯ್ | Photo Credit : X 

ಟೆಹರಾನ್, ಜು.18: ಅಮೆರಿಕದ ದಾಳಿಗಳು ಇನ್ನು ಎರಡು ಅಥವಾ ಮೂರು ದಿನಗಳ ಕಾಲ ಮುಂದುವರಿದರೆ ಟೆಹ್ರಾನ್ ಪೂರ್ಣ ಪ್ರಮಾಣದ ಆಕ್ರಮಣಕಾರಿ ಕಾರ್ಯಾಚರಣೆಗಳನ್ನು ಪುನರಾರಂಭಿಸಲಿದೆ ಎಂದು ಇರಾನ್‍ನ ಸರ್ವೋಚ್ಚ ನಾಯಕರ ಹಿರಿಯ ಮಿಲಿಟರಿ ಸಲಹೆಗಾರ ಮೇಜರ್ ಜನರಲ್ ಮೊಹ್ಸೆನ್ ರೆಜಾಯ್ ಶನಿವಾರ ಎಚ್ಚರಿಸಿದ್ದಾರೆ.

ಇರಾನ್ ಇನ್ನು ಮುಂದೆ ಕೇವಲ ಪ್ರತೀಕಾರದ ಅಥವಾ ತಕ್ಕ ಪ್ರತ್ಯುತ್ತರದ ಕ್ರಮಗಳಿಗೆ ಸೀಮಿತವಾಗುವುದಿಲ್ಲ ಮತ್ತು ಯಾವುದೇ ರಾಜಕೀಯ ಗಡಿಯೂ ಸುರಕ್ಷಿತವಾಗಿರುವುದಿಲ್ಲ' ಎಂದು ರೆಜಾಯ್ ಹೇಳಿರುವುದಾಗಿ ಇರಾನ್‍ನ `ಇರ್ನಾ' ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಮಧ್ಯೆ, `ಆಕ್ರಮಣಕಾರರನ್ನು ಶಿಕ್ಷಿಸಲು' ಖತರ್‌ನಲ್ಲಿರುವ ಅಮೆರಿಕದ ರಾಡಾರ್ ವ್ಯವಸ್ಥೆಗಳು ಮತ್ತು ಮಿಲಿಟರಿ ವಿಮಾನಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಐಆರ್‌ಜಿಸಿ ಪ್ರತಿಪಾದಿಸಿದೆ. ಕುವೈತ್‍ನ ಅಲ್-ಅದಿರಿ ಶಿಬಿರದಲ್ಲಿರುವ ಮದ್ದುಗುಂಡುಗಳ ಡಿಪೋ, ಅಲಿ ಅಲ್-ಸಲೇಮ್ ನೆಲೆಯಲ್ಲಿರುವ ಪ್ರಧಾನ ಕಚೇರಿ ಕಟ್ಟಡಗಳು ಮತ್ತು ಮದ್ದುಗುಂಡುಗಳ ಡಿಪೋಗಳು ಹಾಗೂ ಹಲವಾರು ಸಂವಹನ ಸೇತುವೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಜೋರ್ಡಾನ್‍ನಲ್ಲಿ ಅಲ್-ಅಜ್ರಾಕ್ ನೆಲೆಯಲ್ಲಿರುವ ಇಂಧನ ಟ್ಯಾಂಕ್‍ಗಳ ಮೇಲೆ ದಾಳಿ ನಡೆಸಿರುವುದಾಗಿ ಇರಾನ್ ಮಿಲಿಟರಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News