ಸಾಂದರ್ಭಿಕ ಚಿತ್ರ (Photo: PTI) 

ವಾಷಿಂಗ್ಟನ್: ಅಮೆರಿಕದ ಪಡೆಗಳ ಮೇಲಿನ ದಾಳಿಯಲ್ಲಿ ಇರಾನ್, ಸ್ಪೇಸ್‌ಎಕ್ಸ್‌ ನ ಸ್ಟಾರ್‌ಲಿಂಕ್ ಉಪಗ್ರಹ ಇಂಟರ್ನೆಟ್ ಸೇವೆಗಳನ್ನು ಬಳಸಿಕೊಂಡಿದೆ ಎಂದು ಎಲಾನ್ ಮಸ್ಕ್ ಅವರ ತಂಡ ಹೇಳಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಹೆಸರನ್ನು ಬಹಿರಂಗಪಡಿಸದ ಮೂಲಗಳನ್ನು ಉಲ್ಲೇಖಿಸಿರುವ ವರದಿಯ ಪ್ರಕಾರ, ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ಯುದ್ಧ ಆರಂಭಿಸಿದ ಬಳಿಕ, ಮಾರ್ಚ್ ಆರಂಭದಲ್ಲಿ ಟೆಹ್ರಾನ್‌ ನಿಂದ ಸ್ಟಾರ್‌ಲಿಂಕ್ ಉಪಗ್ರಹ ಇಂಟರ್ನೆಟ್ ಸೇವೆಗಳ ಎರಡು ಅನಧಿಕೃತ ಬಳಕೆಗಳು ನಡೆದಿರುವ ಬಗ್ಗೆ ಮಸ್ಕ್ ಅವರಿಗೆ ಮಾಹಿತಿ ಲಭಿಸಿತ್ತು.

ಇದೇ ವೇಳೆ, ಅಮೆರಿಕದ ಸೇನೆಯು ಸ್ಟಾರ್‌ಲಿಂಕ್‌ ನ ಮಿಲಿಟರಿ ಆವೃತ್ತಿಯಾದ ಸ್ಟಾರ್‌ಶೀಲ್ಡ್ ಮೂಲಕ ಏಕಮುಖ ಡ್ರೋನ್‌ ಗಳನ್ನು ಹಾರಿಸಿರುವ ಬಗ್ಗೆಯೂ ಮಸ್ಕ್ ಅವರಿಗೆ ತಿಳಿಸಲಾಗಿತ್ತು. ಆದರೆ, ಈ ಕಾರ್ಯಾಚರಣೆಯಲ್ಲಿ ಸ್ಟಾರ್‌ಶೀಲ್ಡ್ ಬದಲಿಗೆ ತಳಮಟ್ಟದ ಕಾರ್ಯಾಚರಣೆಗಳಿಗಾಗಿ ಉದ್ದೇಶಿಸಲಾದ ಕಡಿಮೆ ವೆಚ್ಚದ ಸ್ಟಾರ್‌ಲಿಂಕ್ ಯೋಜನೆಯನ್ನು ಬಳಸಲಾಗಿದೆ ಎಂದು ಮೂಲವೊಂದು ವಾಷಿಂಗ್ಟನ್ ಪೋಸ್ಟ್ ಗೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಇರ್ಷಾದ್ ಎಂ. ವೇಣೂರು/ವಾರ್ತಾಭಾರತಿ

contributor

ಇರ್ಷಾದ್ ಎಂ. ವೇಣೂರು ಅವರು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ 13 ವರ್ಷಗಳ ಅನುಭವ ಹೊಂದಿದ್ದಾರೆ. ಪ್ರಸ್ತುತ ‘ವಾರ್ತಾಭಾರತಿ’ಯಲ್ಲಿ ಡಿಜಿಟಲ್ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಡೆಕ್ಕನ್ ಹೆರಾಲ್ಡ್–ಪ್ರಜಾವಾಣಿ’ ಸಮೂಹದಲ್ಲಿ ಫೋಟೊ ಜರ್ನಲಿಸ್ಟ್ ಆಗಿಯೂ ಕೆಲಸ ಮಾಡಿದ್ದಾರೆ. ಅಂತರರಾಷ್ಟ್ರೀಯ ವಿದ್ಯಮಾನಗಳು, ಮಧ್ಯಪ್ರಾಚ್ಯದ ಸಂಘರ್ಷಗಳು, ಗಲ್ಫ್ ರಾಷ್ಟ್ರಗಳ ಬೆಳವಣಿಗೆಗಳು, ರಾಜಕೀಯ, ವಾಯುಯಾನ, ಅಪರಾಧ ಮತ್ತು ಕ್ರೀಡೆ ಅವರ ಆಸಕ್ತಿಯ ಸುದ್ದಿ ಕ್ಷೇತ್ರಗಳಾಗಿವೆ.