×
Ad

ಟೆಲ್‍ಅವೀವ್ ಮೇಲೆ ಇರಾನ್ ಕ್ಷಿಪಣಿ ದಾಳಿ; ಮೊಸ್ಸಾದ್ ಕಚೇರಿಗೆ ವ್ಯಾಪಕ ಹಾನಿ, ಬೆಂಕಿ

Update: 2025-06-17 20:18 IST

ಟೆಹ್ರಾನ್: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಉಲ್ಬಣಿಸುತ್ತಿರುವಂತೆಯೇ, ಇಸ್ರೇಲ್‌ ನ ಟೆಲ್‍ಅವೀವ್ ನಗರದಲ್ಲಿರುವ ಗುಪ್ತಚರ ಏಜೆನ್ಸಿ ಮೊಸ್ಸಾದ್‍ನ ಕಚೇರಿಯ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮಂಗಳವಾರ ಹೇಳಿದೆ.

ಇಸ್ರೇಲ್‌ ನ ಮೊಸ್ಸಾದ್ ಗುಪ್ತಚರ ಏಜೆನ್ಸಿಯ ಟೆಲ್‍ಅವೀವ್ ಕಚೇರಿಯನ್ನು ಗುರಿಯಾಗಿಸಿ ನಡೆಸಿದ ಕ್ಷಿಪಣಿ ದಾಳಿ ಯಶಸ್ವಿಯಾಗಿದ್ದು ವ್ಯಾಪಕ ನಾಶ-ನಷ್ಟ ಸಂಭವಿಸಿದೆ ಮತ್ತು ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು IRGC ಮೂಲಗಳನ್ನು ಉಲ್ಲೇಖಿಸಿ ಇರಾನಿನ ಸರ್ಕಾರಿ ಸ್ವಾಮ್ಯದ ತಸ್ನೀಮ್ ಸುದ್ದಿಸಂಸ್ಥೆ ವರದಿ ಮಾಡಿದೆ. ಹತ್ಯೆಗಳು ಮತ್ತು ದುಷ್ಟ ಕೃತ್ಯಗಳ ಯೋಜನೆ ರೂಪಿಸಲು ಬಳಸಲಾಗುತ್ತಿದ್ದ ಮೊಸ್ಸಾದ್ ಕೇಂದ್ರ ಮತ್ತು ಇಸ್ರೇಲ್‌ ನ ಮಿಲಿಟರಿ ಗುಪ್ತಚರ ನಿರ್ದೇಶನಾಲಯ `ಅಮಾನ್' ಕ್ಷಿಪಣಿ ದಾಳಿಯ ಗುರಿಗಳಾಗಿತ್ತು ಎಂದು IRGC ಹೇಳಿದೆ. ಮೊಸ್ಸಾದ್ ಕಚೇರಿಯಲ್ಲಿ ಬೆಂಕಿ ಪ್ರಜ್ವಲಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಮೊಸ್ಸಾದ್ ಕೇಂದ್ರ ಮತ್ತು `ಅಮಾನ್' ಕಚೇರಿಗಳು ಕಾರ್ಯನಿರ್ವಹಿಸುವ ಹಜ್ರ್ಲಿಯಾದಿಂದ ಯಾವುದೇ ಸುದ್ದಿ ಮತ್ತು ವೀಡಿಯೊ ಪ್ರಸಾರಕ್ಕೆ ಇಸ್ರೇಲ್ ಮಿಲಿಟರಿ ಸೆನ್ಸಾರ್ ವಿಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News