ಇಸ್ರೇಲ್‍ನ ಆಸ್ಪತ್ರೆಗೆ ಬಡಿದ ಇರಾನ್ ನ ಕ್ಷಿಪಣಿ 65 ಮಂದಿಗೆ ಗಾಯ; ವ್ಯಾಪಕ ಹಾನಿ
PC | NDTV
ಜೆರುಸಲೇಂ: ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿಯೊಂದು ದಕ್ಷಿಣ ಇಸ್ರೇಲ್‍ನ ಬೀರ್‍ಶೆಬಾ ಗ್ರಾಮದ ಸೊರೊಕಾ ವೈದ್ಯಕೀಯ ಕೇಂದ್ರಕ್ಕೆ ಅಪ್ಪಳಿಸಿದ್ದು ಕನಿಷ್ಠ 65 ಮಂದಿ ಗಾಯಗೊಂಡಿದ್ದು ವ್ಯಾಪಕ ಹಾನಿಯಾಗಿರುವುದಾಗಿ ಇಸ್ರೇಲ್ ಸರ್ಕಾರದ ವಕ್ತಾರರು ಹೇಳಿರುವುದಾಗಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ದಕ್ಷಿಣ ಇಸ್ರೇಲ್ ನ ಅತೀ ದೊಡ್ಡ ಆಸ್ಪತ್ರೆಯಾಗಿರುವ 1000 ಹಾಸಿಗೆಗಳ ಸಾಮಥ್ರ್ಯವಿರುವ ಸೊರೊಕ ವೈದ್ಯಕೀಯ ಆಸ್ಪತ್ರೆಯ ಮೇಲಿನ ದಾಳಿಗೆ ಇರಾನ್ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಕ್ಷಿಪಣಿ ಅಪ್ಪಳಿಸಿದ ಬಳಿಕ ಆಸ್ಪತ್ರೆಯ ಒಳಗೆ ಗೊಂದಲ, ಆತಂಕದಿಂದ ಸಿಬ್ಬಂದಿಗಳ ಓಡಾಟ, ಕಿಟಕಿ ಬಾಗಿಲುಗಳು, ಬೆಂಚುಗಳು ಛಿದ್ರಗೊಂಡಿರುವ ಹಾಗೂ ಆಸ್ಪತ್ರೆಯಿಂದ ಹೊಗೆಯ ಕಾರ್ಮೋಡ ಆಗಸಕ್ಕೆ ವ್ಯಾಪಿಸುವ, ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳು ಕಿರುಚುತ್ತಿರುವ ವೀಡಿಯೊವನ್ನು ಇಸ್ರೇಲ್ ನ ಮಾಧ್ಯಮಗಳು ಪ್ರಸಾರ ಮಾಡಿವೆ.
ಆಸ್ಪತ್ರೆಯ ಹೊರತಾಗಿ ಇರಾನ್‍ನ ಕ್ಷಿಪಣಿಗಳು ಟೆಲ್‍ಅವೀವ್‍ನ ಬಹುಮಹಡಿ ವಸತಿ ಕಟ್ಟಡಕ್ಕೂ ಇರಾನ್‍ನ ಕ್ಷಿಪಣಿ ಅಪ್ಪಳಿಸಿದ್ದು ಕನಿಷ್ಠ 16 ಗಾಯಾಳುಗಳನ್ನು ಟೆಲ್‍ಅವೀವ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.
ಆಸ್ಪತ್ರೆಯ ಮೇಲೆ ದಾಳಿ ನಡೆಸಿಲ್ಲ. ಆಸ್ಪತ್ರೆಯ ಬಳಿಯಿರುವ ಮಿಲಿಟರಿ ತಾಣವನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇರಾನ್ ನ ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.