Photo Credit : AP 

ವಾಷಿಂಗ್ಟನ್, ನ.27: ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸದಿದ್ದರೆ ಅದು `ಪರಮಾಣು ಹತ್ಯಾಕಾಂಡಕ್ಕೆ' ಕಾರಣವಾಗಬಹುದು ಎಂದು ಎಚ್ಚರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಬಳಿ ಯುರೋಪ್ ಅನ್ನು ತಲುಪಬಲ್ಲ ಸಾಮರ್ಥ್ಯದ ಕ್ಷಿಪಣಿಗಳಿವೆ ಎಂದು ಶುಕ್ರವಾರ ಹೇಳಿರುವುದಾಗಿ Aljazeera ವರದಿ ಮಾಡಿದೆ.

ಇರಾನ್ ನ ಕ್ಷಿಪಣಿ ಸಾಮರ್ಥ್ಯವು ಆ ಪ್ರದೇಶವನ್ನು ಮೀರಿ ವಿಸ್ತರಿಸಿದೆ ಮತ್ತು ಯುರೋಪ್‌ ಗೆ ಸಂಭಾವ್ಯ ಬೆದರಿಕೆಯನ್ನು ಒಡ್ಡಿದೆ. ಅವುಗಳಿಗೆ ಯುರೋಪ್ ಅನ್ನು ತಲುಪುವ ಸಾಮರ್ಥ್ಯವಿದೆ. ನಮ್ಮನ್ನು (ಅಮೆರಿಕವನ್ನು) ತಲುಪಲು ಸಾಧ್ಯವಿಲ್ಲ. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸುವಲ್ಲಿ ವಿಫಲವಾದರೆ ಇರಾನ್, ಇಸ್ರೇಲ್ ಮತ್ತು ಮಧ್ಯಪ್ರಾಚ್ಯದ ಇತರ ದೇಶಗಳ ಮೇಲೆ ಪರಮಾಣು ಅಸ್ತ್ರಗಳನ್ನು ಪ್ರಯೋಗಿಸುತ್ತದೆ. ಆಗ ಪರಮಾಣು ಹತ್ಯಾಕಾಂಡ ಸಂಭವಿಸುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.

ಪ್ರಾದೇಶಿಕ ಸ್ಥಿರತೆಯ ಮಹತ್ವವನ್ನು ಒತ್ತಿಹೇಳಿದ ಟ್ರಂಪ್, `ನಮಗೆ ಮಧ್ಯಪ್ರಾಚ್ಯದ ತೈಲದ ಅಗತ್ಯವಿಲ್ಲ. ಆದರೆ ನಮಗೆ ಮಧ್ಯಪ್ರಾಚ್ಯದಲ್ಲಿ ಶಾಂತಿಯ ಅಗತ್ಯವಿದೆ. ಮಧ್ಯಪ್ರಾಚ್ಯದ ದೇಶಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಕಷ್ಟು ಸಾಮರ್ಥ್ಯವನ್ನು ಬೆಳೆಸಿಕೊಳ್ಳುವವರೆಗೆ ಅಮೆರಿಕವು ಅವರಿಗೆ ಬೆಂಬಲ ನೀಡುವುದನ್ನು ಮುಂದುವರಿಸಬೇಕು' ಎಂದು ಪ್ರತಿಪಾದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೃಷ್ಣ ಮೂರ್ತಿ , ವಾರ್ತಾಭಾರತಿ

contributor