×
Ad

ಯೆಮನ್ ರಾಜಧಾನಿ ಮೇಲೆ ಇಸ್ರೇಲ್ ದಾಳಿ : ಕನಿಷ್ಠ 9 ಮಂದಿ ಮೃತ್ಯು

Update: 2025-09-26 22:05 IST

PC : aljazeera.com

ಸನಾ, ಸೆ.26: ಯೆಮನ್ ರಾಜಧಾನಿ ಸನಾದ ಮೇಲೆ ಗುರುವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ನಾಲ್ವರು ಮಕ್ಕಳು, ಮೂವರು ಮಹಿಳೆಯರ ಸಹಿತ ಕನಿಷ್ಠ 9 ಮಂದಿ ಮೃತಪಟ್ಟಿದ್ದುಇ 142 ಮಂದಿ ಗಾಯಗೊಂಡಿರುವುದಾಗಿ ಹೌದಿ ಮೂಲಗಳು ಶುಕ್ರವಾರ ಹೇಳಿವೆ.

ಹೌದಿಗಳ ನಿಯಂತ್ರಣದಲ್ಲಿರುವ ಯೆಮನ್‍ನ ಉತ್ತರ ಭಾಗವನ್ನು ಗುರಿಯಾಗಿಸಿ ದಾಳಿ ನಡೆದಿದೆ. ಗಾಯಾಳುಗಳಲ್ಲಿ 59 ಮಕ್ಕಳು, 35 ಮಹಿಳೆಯರು ಸೇರಿದ್ದಾರೆ. ಕ್ಷಿಪಣಿ ದಾಳಿಗಳಲ್ಲಿ ಕುಸಿದು ಬಿದ್ದಿರುವ ಕಟ್ಟಡಗಳ ಅವಶೇಷಗಳಡಿ ಹಲವರು ಸಿಲುಕಿರುವ ವರದಿಯಿದ್ದು ಸಾವು-ನೋವಿನ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೌದಿಗಳ ಮಿಲಿಟರಿ ಕಮಾಂಡ್ ಪ್ರಧಾನ ಕಚೇರಿ, ಮಿಲಿಟರಿ ಶಿಬಿರಗಳು, ಭದ್ರತೆ ಮತ್ತು ಗುಪ್ತಚರ ಸೌಲಭ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಮಿಲಿಟರಿ ಪ್ರತಿಪಾದಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News