×
Ad

ಗಾಝಾದಲ್ಲಿ ಟರ್ಕಿಯ ಸಶಸ್ತ್ರ ಪಡೆಗೆ ಒಪ್ಪಿಗೆಯಿಲ್ಲ: ಇಸ್ರೇಲ್

Update: 2025-10-27 20:49 IST

Photo Credit : X \ @gidonsaar

ಜೆರುಸಲೇಂ, ಅ.27: ಯುದ್ಧವನ್ನು ಕೊನೆಗೊಳಿಸುವ ಟ್ರಂಪ್ ಯೋಜನೆಯಡಿ ಗಾಝಾದಲ್ಲಿ ಟರ್ಕಿಯ ಸಶಸ್ತ್ರ ಪಡೆಗಳ ಉಪಸ್ಥಿತಿಯನ್ನು ಇಸ್ರೇಲ್ ಒಪ್ಪುವುದಿಲ್ಲ ಎಂದು ಇಸ್ರೇಲ್‍ನ ವಿದೇಶಾಂಗ ಸಚಿವ ಗಿಡಿಯಾನ್ ಸಾ'ರ್ ಸೋಮವಾರ ಹೇಳಿದ್ದಾರೆ.

ಕದನ ವಿರಾಮಕ್ಕೆ ನೆರವಾಗಲು ಗಾಝಾದಲ್ಲಿ ಅಂತರಾಷ್ಟ್ರೀಯ ಪಡೆಯನ್ನು ನಿಯೋಜಿಸುವುದು ಟ್ರಂಪ್ ಶಾಂತಿ ಯೋಜನೆಯಲ್ಲಿ ಸೇರಿದೆ. ಆದರೆ ಅರಬ್ ಹಾಗೂ ಇತರ ರಾಷ್ಟ್ರಗಳು ಅಂತರಾಷ್ಟ್ರೀಯ ಪಡೆಗೆ ಯೋಧರನ್ನು ಕಳುಹಿಸಲು ಸಿದ್ಧವಿದೆಯೇ ಎಂಬುದು ಸ್ಪಷ್ಟವಾಗಿಲ್ಲ. `ಸಶಸ್ತ್ರ ಪಡೆಗಳನ್ನು ಕಳುಹಿಸಲು ಸಿದ್ಧವಿರುವ ರಾಷ್ಟ್ರಗಳು ಇಸ್ರೇಲ್‍ ಗೆ ಕನಿಷ್ಠ ನ್ಯಾಯಯುತವಾಗಿರಬೇಕು. ಆದರೆ ಎರ್ಡೋಗನ್ ನೇತೃತ್ವದ ಟರ್ಕಿಯು ಇಸ್ರೇಲ್ ವಿರುದ್ಧ ಪ್ರತಿಕೂಲ ನಿಲುವನ್ನು ಹೊಂದಿದೆ. ಆದ್ದರಿಂದ ಅವರ ಸಶಸ್ತ್ರ ಪಡೆಗಳು ಗಾಝಾ ಪಟ್ಟಿಯೊಳಗೆ ಪ್ರವೇಶಿಸಲು ಅವಕಾಶ ನೀಡುವುದು ಸಮಂಜಸವಲ್ಲ. ನಮ್ಮ ಅಮೆರಿಕನ್ ಮಿತ್ರರಿಗೂ ಇದನ್ನು ತಿಳಿಸಿದ್ದೇವೆ' ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News