ಅಮೆರಿಕ | ಇಸ್ರೇಲ್ ರಾಯಭಾರಿ ಕಚೇರಿಯ ಇಬ್ಬರು ಸಿಬ್ಬಂದಿಯನ್ನು ಗುಂಡಿಕ್ಕಿ ಹತ್ಯೆ
Update: 2025-05-22 10:21 IST
Photo | hindustantimes
ವಾಷಿಂಗ್ಟನ್ : ಅಮೆರಿಕದ ವಾಷಿಂಗ್ಟನ್ ಡಿಸಿಯ ಯಹೂದಿ ವಸ್ತುಸಂಗ್ರಹಾಲಯದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಇಸ್ರೇಲ್ ರಾಯಭಾರಿ ಕಚೇರಿಯ ಇಬ್ಬರು ಸಿಬ್ಬಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ವಾಯುವ್ಯ ವಾಷಿಂಗ್ಟನ್ ಡಿ.ಸಿಯ ಕ್ಯಾಪಿಟಲ್ ಯಹೂದಿ ವಸ್ತು ಸಂಗ್ರಹಾಲಯದ ಬಳಿ ಓರ್ವ ಪುರುಷ ಮತ್ತು ಮಹಿಳೆ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ತಿಳಿಸಿದೆ.
ಘಟನೆಯ ಮೊದಲು ವಸ್ತುಸಂಗ್ರಹಾಲಯದ ಹೊರಗೆ ಅನುಮಾನಾಸ್ಪದವಾಗಿದ್ದ ಓರ್ವ ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ. ಆತ ಫೆಲೆಸ್ತೀನ್ ಪರ ಘೋಷಣೆ ಕೂಗುತ್ತಿದ್ದ ಎಂದು ವಾಷಿಂಗ್ಟನ್ ಪೊಲೀಸ್ ಮುಖ್ಯಸ್ಥೆ ಪಮೇಲಾ ಸ್ಮಿತ್ ಹೇಳಿದ್ದಾರೆ.
ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಅವರು ಈ ಸುದ್ದಿಯನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.