×
Ad

ಜಮ್ಮುಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿದೆ ಎಂದು ತಪ್ಪಾದ ನಕ್ಷೆ ಹಂಚಿಕೊಂಡ ಇಸ್ರೇಲ್ : ಆಕ್ರೋಶದ ಬಳಿಕ ಕ್ಷಮೆಯಾಚನೆ

Update: 2025-06-14 10:12 IST

Photo | ndtv

ಹೊಸದಿಲ್ಲಿ: ಜಮ್ಮುಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿದೆ ಎಂದು ಭಾರತದ ಅಂತಾರಾಷ್ಟ್ರೀಯ ಗಡಿಗಳ ಬಗ್ಗೆ ತಪ್ಪಾದ ನಕ್ಷೆಯನ್ನು ಇಸ್ರೇಲ್ ಡಿಫೆನ್ಸ್ ಪೋರ್ಸ್‌(IDF) ಪೋಸ್ಟ್ ಮಾಡಿದ್ದು, ವಿವಾದವಾಗುತ್ತಿದ್ದಂತೆ ಕ್ಷಮೆಯಾಚಿಸಿದೆ.

ಜಮ್ಮುಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿದೆ ಎಂದು ತಪ್ಪಾದ ನಕ್ಷೆಯನ್ನು ಹಂಚಿಕೊಂಡ ಬಗ್ಗೆ ಹಲವಾರು ಭಾರತೀಯ ಎಕ್ಸ್ ಬಳಕೆದಾರರು ಇಸ್ರೇಲ್ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಪೋಸ್ಟ್ ಅನ್ನು ಡಿಲಿಟ್ ಮಾಡುವಂತೆ ಆಗ್ರಹಿಸಿದ್ದರು. ಕೆಲವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಪೋಸ್ಟ್‌ನ್ನು  ಟ್ಯಾಗ್ ಮಾಡಿದ್ದರು.

ʼಭಾರತ ಏಕೆ ತಟಸ್ಥವಾಗಿದೆ ಎಂದು ಈಗ ನಿಮಗೆ ಅರ್ಥವಾಗಿದೆಯೇ? ರಾಜತಾಂತ್ರಿಕತೆಯಲ್ಲಿ ಯಾರೂ ನಿಜವಾಗಿಯೂ ನಿಮ್ಮ ಸ್ನೇಹಿತರಲ್ಲʼ ಎಂಬ ಇಂಡಿಯನ್ ರೈಟ್ ವಿಂಗ್ ಕಮ್ಯುನಿಟಿ ಎಂಬ ಎಕ್ಸ್ ಖಾತೆ ಪೋಸ್ಟ್ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಇಸ್ರೇಲ್ ರಕ್ಷಣಾ ಪಡೆ ಐಡಿಎಫ್, ʼನಕ್ಷೆಯು ಗಡಿಗಳನ್ನು ನಿಖರವಾಗಿ ಚಿತ್ರಿಸಲು ವಿಫಲವಾಗಿದೆ. ಈ ಬಗ್ಗೆ ನಾವು ಕ್ಷಮೆಯಾಚಿಸುತ್ತೇವೆʼ ಎಂದು ಹೇಳಿದೆ.

ಐಡಿಎಫ್‌ನ ತಪ್ಪು ನಕ್ಷೆ ಪೋಸ್ಟ್ ಮಾಡಿರುವ ಬಗ್ಗೆ ಭಾರತ ಸರಕಾರ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News