×
Ad

ಗಾಝಾ ಆಸ್ಪತ್ರೆಯ ಮೇಲೆ ಇಸ್ರೇಲ್ ದಾಳಿ: ಚಿಕಿತ್ಸೆ ಪಡೆಯುತ್ತಿದ್ದ ಪತ್ರಕರ್ತ ಮೃತ್ಯು

Update: 2025-05-13 20:42 IST

ಸಾಂದರ್ಭಿಕ ಚಿತ್ರ | PC: PTI

ಜೆರುಸಲೇಂ: ದಕ್ಷಿಣ ಗಾಝಾದ ಖಾನ್‍ಯೂನಿಸ್ ನಗರದಲ್ಲಿನ ನಾಸೆರ್ ಆಸ್ಪತ್ರೆಯ ಮೇಲೆ ಮಂಗಳವಾರ ಇಸ್ರೇಲ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತ್ರಕರ್ತ ಹಸನ್ ಅಸ್ಲಿಹ್ ಮೃತಪಟ್ಟಿದ್ದು ಹಲವು ನಾಗರಿಕರು ಗಾಯಗೊಂಡಿರುವುದಾಗಿ ಹಮಾಸ್ ಮೂಲಗಳು ಹೇಳಿವೆ.

ಎಪ್ರಿಲ್ 7ರಂದು ಇಸ್ರೇಲ್‍ನ ದಾಳಿಯಲ್ಲಿ ಗಾಯಗೊಂಡಿದ್ದ ಹಸನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕಟ್ಟಡಕ್ಕೆ ಇಸ್ರೇಲ್ ನಡೆಸಿದ ಬಾಂಬ್‍ ದಾಳಿಯಲ್ಲಿ ಹಸನ್ ಸಾವನ್ನಪ್ಪಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ.

ದಾಳಿಯನ್ನು `ಪತ್ರಕರ್ತರನ್ನು ರಕ್ಷಿಸುವ ಸಮಿತಿ' ಖಂಡಿಸಿದ್ದು ಯುದ್ಧ ಆರಂಭಗೊಂಡಂದಿನಿಂದ ಇಸ್ರೇಲ್, ಲೆಬನಾನ್ ಮತ್ತು ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಕನಿಷ್ಠ 178 ಪತ್ರಕರ್ತರು ಮತ್ತು ಮಾಧ್ಯಮ ಸಿಬ್ಬಂದಿ ಸಾವನ್ನಪ್ಪಿರುವುದಾಗಿ ಹೇಳಿದೆ.

ಹಸನ್ ಆಸ್ಲಿಹ್ ಪತ್ರಕರ್ತರ ಸೋಗಿನಲ್ಲಿ ಹಮಾಸ್ ಪರ ಕಾರ್ಯನಿರ್ವಹಿಸುತ್ತಿದ್ದು 2023ರ ಅಕ್ಟೋಬರ್ 7ರಂದು ಇಸ್ರೇಲ್‍ ನೊಳಗೆ ನುಗ್ಗಿ ಹಮಾಸ್ ಕಾರ್ಯಕರ್ತರು ನಡೆಸಿದ್ದ ಸಾಮೂಹಿಕ ಹತ್ಯಾಕಾಂಡದಲ್ಲಿ ಸಕ್ರಿಯ ಪಾತ್ರ ನಿರ್ವಹಿಸಿರುವುದಾಗಿ ಇಸ್ರೇಲಿ ಮಿಲಿಟರಿ ಆರೋಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News