×
Ad

2023ರ ಗಲಭೆ ಪ್ರಕರಣ | ತೆಹ್ರಿಕೆ ಇನ್ಸಾಫ್ ಪಕ್ಷದ 47 ಮಂದಿಗೆ 10 ವರ್ಷ ಜೈಲು

Update: 2026-03-07 22:28 IST

ಸಾಂದರ್ಭಿಕ ಚಿತ್ರ | Photo Credit : PTI 

 

ಇಸ್ಲಾಮಾಬಾದ್, ಮಾ.7: 2023ರ ಮೇ 9ರಂದು ನಡೆದ ಹಿಂಸಾಚಾರ ಹಾಗೂ ದೊಂಬಿ ಪ್ರಕರಣದಲ್ಲಿ ಶಾಮೀಲಾದ ಆರೋಪದಲ್ಲಿ ಇಲ್ಲಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವೊಂದು ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತೆಹ್ರಿಕೆ ಇನ್ಸಾಫ್ ಪಕ್ಷದ 47 ನಾಯಕರು ಹಾಗೂ ಅವರ ಬೆಂಬಲಿಗರಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ 5 ಲಕ್ಷ ಪಾಕ್ ರೂ. ದಂಡವನ್ನು ವಿಧಿಸಿದೆ.

ಪಕ್ಷದ ಸಂಸ್ಥಾಪಕ ಇಮ್ರಾನ್ ಖಾನ್ ಅವರ ಬಂಧನದ ಬಳಿಕ ಪಿಟಿಐ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಪಾಕ್‌ನಾದ್ಯಂತ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು.

ಉದ್ರಿಕ್ತ ಪ್ರತಿಭಟನಕಾರರು ರಾವಲ್ಪಿಂಡಿಯಲ್ಲಿ ಸೇನಾ ವರಿಷ್ಠರ ಮಹಾಕಾರ್ಯಾಲಯದ ಮೇಲೆ ದಾಳಿಗೂ ಪ್ರಯತ್ನಿಸಿದ್ದರು.

ಘಟನೆ ನಡೆದ ಬೆನ್ನಲ್ಲೇ ರಾವಲ್ಪಿಂಡಿಯ ಆರ್.ಎ. ಬಝಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಟಿಐ ಬೆಂಬಲಿಗರ ವಿರುದ್ಧ ದಂಗೆ, ಮುತ್ತಿಗೆ ಹಾಕುವಿಕೆ, ದಾಂಧಲೆ, ಪೊಲೀಸರ ಮೇಲೆ ದಾಳಿ ಹಾಗೂ ಸರಕಾರಿ ಸೊತ್ತಿಗೆ ಹಾನಿ, ಅದರಲ್ಲೂ ಸೇನಾ ವರಿಷ್ಠರ ಪ್ರಧಾನ ಕಾರ್ಯಾಲಯದ ಪ್ರವೇಶದ್ವಾರ, ಹಂಝಾ ಕ್ಯಾಂಪ್, ಸೇನಾ ಮ್ಯೂಜಿಯಂ ಹಾಗೂ ಮೆಟ್ರೋ ನಿಲ್ದಾಣದ ಮೇಲೆ ದಾಳಿ ನಡೆಸಿದ ಆರೋಪಗಳನ್ನು ಹೊರಿಸಲಾಗಿತ್ತು.

ಈ 47 ಆರೋಪಿಗಳನ್ನು ಈಗಾಗಲೇ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಅಪರಾಧಿಗಳೆಂದು ಘೋಷಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News