ಜೆನ್ನಿಫರ್ ಬ್ಯಾರೆಟೊ | Photo Credit : ddindia.co.in

ಸ್ಯಾನ್ ಜುವಾನ್: 116 ದೇಶಗಳ ಸ್ಪರ್ಧಿಗಳೊಂದಿಗೆ ಪೈಪೋಟಿ ನಡೆಸಿ, ಪೋರ್ಟೊ ರಿಕೊದ ಜೆನ್ನಿಫರ್ ಬ್ಯಾರೆಟೊ ಅವರು 2026ರ `ಮಿಸ್ ಯೂನಿವರ್ಸ್' (ವಿಶ್ವ ಸುಂದರಿ) ಕಿರೀಟವನ್ನು ಗೆದ್ದುಕೊಂಡಿದ್ದು ಈ ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಮೊದಲ ವಿವಾಹಿತ ಮಹಿಳೆ ಮತ್ತು ತಾಯಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವೆನೆಝುವೆಲಾದ ಕ್ಲಾರಾ ಗೋಯೆಟ್ಜ್ ಮತ್ತು ಡೊಮಿನಿಕನ್ ರಿಪಬ್ಲಿಕ್‍ನ ಮೆಲಿಸ್ಸಾ ನುನೆಜ್ ಅಂತಿಮ ಸುತ್ತಿನ ಸ್ಪರ್ಧಿಗಳಾಗಿದ್ದರು. ಮತ್ತೊಂದೆಡೆ, ಭಾರತದ ಸ್ಪರ್ಧಿ, ಕೇರಳದ ಕಾನೂನು ವಿದ್ಯಾರ್ಥಿನಿ ಕಾಜಿಯಾ ಲಿಜ್ ಮೆಜೊ ಅವರು ಟಾಪ್ 12ರ ಹಂತಕ್ಕೆ ತಲುಪಲು ವಿಫಲವಾದ ಕಾರಣ ಭಾರತದ ನಿರೀಕ್ಷೆಗಳು ಹುಸಿಯಾದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೃಷ್ಣ ಮೂರ್ತಿ , ವಾರ್ತಾಭಾರತಿ

contributor