ಜೋರ್ಡಾನ್ | ಇರಾನ್ ದಾಳಿಯಲ್ಲಿ ಅಮೆರಿಕದ ಇಬ್ಬರು ಸೈನಿಕರು ಮೃತ್ಯು

Update: 2026-07-19 20:06 IST

Photo Credit : AP 

ವಾಶಿಂಗ್ಟನ್, ಜು.19: ಶುಕ್ರವಾರ ಜೋರ್ಡಾನ್‍ನಲ್ಲಿ ಇರಾನ್ ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಅಮೆರಿಕದ ಇಬ್ಬರು ಸೈನಿಕರು ಮೃತಪಟ್ಟಿದ್ದು, ಮತ್ತೊಬ್ಬ ಸೈನಿಕ ನಾಪತ್ತೆಯಾಗಿದ್ದಾರೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಖಚಿತಪಡಿಸಿದೆ.

ಜುಲೈ 17 ರಂದು ಜೋರ್ಡಾನ್‍ನಲ್ಲಿ ಇರಾನ್‍ನ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ವಿರುದ್ಧ ಅಮೆರಿಕದ ಸೆಂಟ್ರಲ್ ಕಮಾಂಡ್ ಮತ್ತು ಪಾಲುದಾರ ಪಡೆಗಳು ರಕ್ಷಣೆ ನೀಡುತ್ತಿದ್ದಾಗ, ಇಬ್ಬರು ಅಮೆರಿಕನ್ ಸೈನಿಕರು ಮೃತಪಟ್ಟಿದ್ದಾರೆ. ಒಬ್ಬ ಸೈನಿಕ ನಾಪತ್ತೆಯಾಗಿದ್ದಾರೆ. ನಾಲ್ಕು ಅಮೆರಿಕನ್ ಸೈನಿಕರನ್ನು ಜೋರ್ಡಾನ್ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿತ್ತು. ಕುಟುಂಬಗಳ ಮೇಲಿನ ಗೌರವದಿಂದಾಗಿ, ಮೃತರ ಹತ್ತಿರದ ಸಂಬಂಧಿಗಳಿಗೆ ಮಾಹಿತಿ ನೀಡಿದ 24 ಗಂಟೆಗಳ ನಂತರವಷ್ಟೇ ಮೃತ ಸೈನಿಕರ ಗುರುತು ಸೇರಿದಂತೆ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಲಾಗುವುದು. ಯುದ್ಧ ಆರಂಭವಾದಾಗಿನಿಂದ ಇದುವರೆಗೆ ಮೃತಪಟ್ಟ ಅಮೆರಿಕನ್ ಸೈನಿಕರ ಒಟ್ಟು ಸಂಖ್ಯೆ 16 ಕ್ಕೆ ಏರಿದೆ ಮತ್ತು 430 ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ ಎಂದು `ಎಕ್ಸ್'ನಲ್ಲಿ ಅಮೆರಿಕದ ಮಿಲಿಟರಿ ಪೋಸ್ಟ್ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News