30ನೇ ಬಾರಿ ಎವರೆಸ್ಟ್ ಏರಿ ದಾಖಲೆ ನಿರ್ಮಿಸಿದ ಕಮಿರಿತ ಶೆರ್ಪ
Update: 2024-05-25 22:37 IST
PC : Kami Rita Sherpa /instagram
ಕಠ್ಮಂಡು: ನೇಪಾಳದ ಕಮಿರಿತ ಶೆರ್ಪ 30ನೇ ಬಾರಿಗೆ ಎವರೆಸ್ಟ್ ಶಿಖರವನ್ನು ಏರಿ ವಿಶ್ವದಾಖಲೆ ಬರೆದ್ದಾರೆ. ಶಿಖರದಿಂದ ಕೆಳಗೆ ಇಳಿಯುವ ಸಂದರ್ಭ ಅವರ ಜತೆಗಿದ್ದ ಇಬ್ಬರು ಪರ್ವತಾರೋಹಿಗಳು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೇ 12ರಂದು ಜಗತ್ತಿನ ಅತೀ ಎತ್ತರದ ಶಿಖರವಾದ ಎವರೆಸ್ಟ್ ಅನ್ನು 29ನೇ ಬಾರಿ ಏರುವ ಮೂಲಕ ತನ್ನದೇ ದಾಖಲೆಯನ್ನು ತಿದ್ದಿ ಬರೆದಿದ್ದ ಕಮಿರಿತ ಶೆರ್ಪ, ಎರಡು ವಾರಗಳೊಳಗೆ 30ನೇ ಬಾರಿ 29,032 ಅಡಿ ಎತ್ತರದ ಶಿಖರದ ತುದಿಯನ್ನು ತಲುಪಿ ಹೊಸ ದಾಖಲೆ ಬರೆದಿರುವುದಾಗಿ ನೇಪಾಳದ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದೇ ಸಂದರ್ಭ, ಓರ್ವ ಬ್ರಿಟಿಷ್ ಪರ್ವತಾರೋಹಿ ಹಾಗೂ ನೇಪಾಳದ ಮಾರ್ಗದರ್ಶಿ ಎವರೆಸ್ಟ್‍ನ ದಕ್ಷಿಣದ ಶೃಂಗದಿಂದ ಜಾರಿಬಿದ್ದು ನಾಪತ್ತೆಯಾಗಿದ್ದು ಅವರ ಶೋಧ ಕಾರ್ಯ ಮುಂದುವರಿದಿದೆ ಎಂದು ವರದಿಯಾಗಿದೆ.