×
Ad

ಕಾಮಿಡಿಯನ್ ಕಪಿಲ್ ಶರ್ಮಗೆ ಖಾಲಿಸ್ತಾನ್ ನಾಯಕ ಪನ್ನೂನ್ ಬೆದರಿಕೆ

Update: 2025-07-12 22:15 IST

ಖಾಲಿಸ್ತಾನ್ ನಾಯಕ ಪನ್ನೂನ್ , ಕಪಿಲ್ ಶರ್ಮ | PC: PTI 

ಒಟ್ಟಾವ: ಖಾಲಿಸ್ತಾನ್ ಪರ ಪ್ರತ್ಯೇಕತಾವಾದಿ ಗುಂಪು `ಸಿಖ್ಸ್ ಫಾರ್ ಜಸ್ಟಿಸ್'ನ ಸ್ಥಾಪಕ ಗುರುಪತ್ವಂತ್ ಸಿಂಗ್ ಪನ್ನೂನ್ ಕಾಮಿಡಿಯನ್ ಕಪಿಲ್ ಶರ್ಮಗೆ ಬೆದರಿಕೆ ಒಡ್ಡಿದ್ದು `ಕೆನಡಾ ನಿಮ್ಮ ಆಟದ ಮೈದಾನವಲ್ಲ. ನಿಮ್ಮ ರಕ್ತದ ಹಣವನ್ನು ಹಿಂಪಡೆದು ಹಿಂದುಸ್ತಾನ್‍ ಗೆ ತಕ್ಷಣ ಹಿಂದಿರುಗಿ' ಎಂದು ಹೇಳಿರುವುದಾಗಿ ವರದಿಯಾಗಿದೆ.

ಶರ್ಮ ಕೆನಡಾದಲ್ಲಿ ವ್ಯವಹಾರ ನಡೆಸುವ ನೆಪದಲ್ಲಿ ಹಿಂದುತ್ವವನ್ನು ಪ್ರಚಾರ ಮಾಡುತ್ತಿದ್ದು ತನ್ನ ನೆಲದಲ್ಲಿ ಇಂತಹ ಪರಿಕಲ್ಪನೆ ರೂಪುಗೊಳ್ಳಲು ಕೆನಡಾ ಅವಕಾಶ ನೀಡುವುದಿಲ್ಲ' ಎಂದು ವೀಡಿಯೊ ಸಂದೇಶದಲ್ಲಿ ಪನ್ನೂನ್ ಎಚ್ಚರಿಕೆ ನೀಡಿದ್ದಾನೆ.

ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ಕಪಿಲ್ ಶರ್ಮ `ಕ್ಯಾಪ್ಸ್ ಕೆಫೆ' ಎಂಬ ರೆಸ್ಟಾರೆಂಟ್ ಅನ್ನು ಇತ್ತೀಚೆಗೆ ಆರಂಭಿಸಿದ್ದರು. ಬುಧವಾರ ರಾತ್ರಿ ರೆಸ್ಟಾರೆಂಟ್ ಮೇಲೆ ಗುರುತಿಸಲಾಗದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ದಾಳಿಗೆ ಪ್ರತಿಕ್ರಿಯಿಸಿದ್ದ ರೆಸ್ಟಾರೆಂಟ್‍ನ ನಿರ್ವಾಹಕರು `ಗುಂಡಿನ ದಾಳಿಯಿಂದ ಆಘಾತವಾಗಿದೆ. ಆದರೆ ಹಿಂಸಾಚಾರದ ವಿರುದ್ಧ ದೃಢವಾಗಿ ನಿಲ್ಲುವುದಾಗಿ' ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News