ಕಾಶ್ಮೀರ ವಿಷಯವನ್ನು ಭಾರತ, ಪಾಕ್ ನೇರವಾಗಿ ಇತ್ಯರ್ಥ ಪಡಿಸಿಕೊಳ್ಳಬೇಕು : ಅಮೆರಿಕ
ಡೊನಾಲ್ಡ್ ಟ್ರಂಪ್ | PTI
ವಾಷಿಂಗ್ಟನ್, ಸೆ.26: ಕಾಶ್ಮೀರ ವಿಷಯವನ್ನು ಭಾರತ ಮತ್ತು ಪಾಕಿಸ್ತಾನಗಳು ನೇರವಾಗಿ ಇತ್ಯರ್ಥಗೊಳಿಸಬೇಕು ಎಂಬುದು ಅಮೆರಿಕದ ದೀರ್ಘಕಾಲದ ನಿಲುವಾಗಿದ್ದು ಎರಡೂ ದೇಶಗಳ ನಡುವೆ ಮಧ್ಯಪ್ರವೇಶಿಸುವ ಉದ್ದೇಶವಿಲ್ಲ ಎಂದು ಅಮೆರಿಕಾದ ವಿದೇಶಾಂಗ ಇಲಾಖೆಯ ಅಧಿಕಾರಿ ಹೇಳಿದ್ದಾರೆ.
ಟ್ರಂಪ್ ತಮ್ಮೆದುರು ಇರುವ ಸಾಕಷ್ಟು ಬಿಕ್ಕಟ್ಟುಗಳ ಬಗ್ಗೆ ಗಮನ ಹರಿಸಬೇಕಿದೆ. ಆದರೆ ಒಂದು ವೇಳೆ ಎರಡೂ ಕಡೆಯವರು ನಿರ್ದಿಷ್ಟವಾಗಿ ವಿನಂತಿಸಿದರೆ ಅವರು ಸಹಾಯ ಮಾಡಲು ಸಿದ್ಧವಿದ್ದಾರೆ. ಕಾಶ್ಮೀರ ವಿಷಯವನ್ನು ಭಾರತ ಮತ್ತು ಪಾಕಿಸ್ತಾನವೇ ಪರಿಹರಿಸಿಕೊಳ್ಳಬೇಕು. ನಮ್ಮ ದ್ವಿಪಕ್ಷೀಯ ಸಂಬಂಧಗಳಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ನಾವು ಪ್ರತ್ಯೇಕವಾಗಿ (ನಮ್ಮ ಹಿತಾಸಕ್ತಿಗಳಿಗೆ ಆದ್ಯತೆ ನೀಡುವ ಅಮೆರಿಕ ಮೊದಲು ಮಾನದಂಡದ ಮೂಲಕ) ನೋಡುತ್ತೇವೆ ' ಎಂದ ಅವರು, ಕಳೆದ ಮೇ ತಿಂಗಳಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಒಪ್ಪಂದ ಏರ್ಪಡುವಲ್ಲಿ ಟ್ರಂಪ್ ಸರಕಾರ ಮಹತ್ವದ ಪಾತ್ರ ವಹಿಸಿತ್ತು' ಎಂದು ಪ್ರತಿಪಾದಿಸಿರುವುದಾಗಿ ವರದಿಯಾಗಿದೆ.