ಬ್ರಿಟಿಷ್ ಪರ್ವತಾರೋಹಣ ಗೈಡ್ ಕೆಂಟಾನ್ ವಿಶ್ವದಾಖಲೆ
ಕೆಂಟನ್ ಕೂಲ್ | PC : X \ @KentonCool
ಕಠ್ಮಂಡು: ಬ್ರಿಟನ್ ನ ಪರ್ವತಾರೋಹಣ ಗೈಡ್ ಕೆಂಟನ್ ಕೂಲ್ 19ನೇ ಬಾರಿ ಎವರೆಸ್ಟ್ ಪರ್ವತವನ್ನು ಏರುವ ಮೂಲಕ ಹೊಸ ವಿಶ್ವದಾಖಲೆ ಬರೆದಿದ್ದಾರೆ.
ಶೆರ್ಪಾ ಹೊರತಾಗಿ ಎವರೆಸ್ಟ್ ಪರ್ವತವನ್ನು ಅತೀ ಹೆಚ್ಚು ಬಾರಿ ಏರಿದ ದಾಖಲೆ ಈಗ 51 ವರ್ಷದ ಕೆಂಟನ್ ಕೂಲ್ ಹೆಸರಲ್ಲಿದೆ. ನೈಋತ್ಯ ಇಂಗ್ಲೆಂಡ್ ಮೂಲದವರಾದ ಕೂಲ್ 8,849 ಮೀಟರ್ ಎತ್ತರವನ್ನು ಇತರ ಪರ್ವತಾರೋಹಿಗಳ ಜೊತೆ ರವಿವಾರ ಯಶಸ್ವಿಯಾಗಿ ತಲುಪಿದ್ದು ಅವರು ಕ್ಷೇಮವಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 2004ರಲ್ಲಿ ಮೊದಲ ಬಾರಿ ಎವರೆಸ್ಟ್ ಏರಿದ್ದ ಕೂಲ್ ಆ ಬಳಿಕ ಬಹುತೇಕ ಪ್ರತೀ ವರ್ಷ ಈ ಸಾಹಸ ಮಾಡುತ್ತಿದ್ದರು. ಆದರೆ 2014ರಲ್ಲಿ ಅವರ ಶೆರ್ಪಾ ಮಾರ್ಗದರ್ಶಿ ಹಿಮಪಾತದಿಂದ ಸಾವನ್ನಪ್ಪಿದ್ದರಿಂದ ಮತ್ತು 2015ರಲ್ಲಿ ಮತ್ತೊಂದು ಮಾರಣಾಂತಿಕ ಹಿಮಪಾತದ ಕಾರಣ ಹಾಗೂ 2020ರಲ್ಲಿ ಕೋವಿಡ್ ಸಾಂಕ್ರಾಮಿಕದಿಂದಾಗಿ ಎವರೆಸ್ಟ್ ಏರಲು ಸಾಧ್ಯವಾಗಿರಲಿಲ್ಲ.
ನೇಪಾಳದ ಶೆರ್ಪಾ ಮಾರ್ಗದರ್ಶಿ ಕಮಿ ರಿತ ಶೆರ್ಪಾ 30 ಬಾರಿ ಎವರೆಸ್ಟ್ ಏರಿದ ವಿಶ್ವದಾಖಲೆ ಹೊಂದಿದ್ದಾರೆ.