×
Ad

ಕೆನಡಾ: ಖಾಲಿಸ್ತಾನ್ ಪರ ರ್‍ಯಾಲಿಯಲ್ಲಿ ಪಾಕಿಸ್ತಾನದ ಧ್ವಜ ಪ್ರದರ್ಶನ

Update: 2025-06-08 23:20 IST

ಫೈಲ್ ಫೋಟೋ :(AFP/OLI SCARFF)

ಒಟ್ಟಾವ, ಜೂ.8: ಕೆನಡಾದ ವ್ಯಾಂಕೋವರ್ ನಲ್ಲಿ ನಡೆದ ಖಾಲಿಸ್ತಾನ್ ಪರ ರ್‍ಯಾಲಿಯಲ್ಲಿ ಖಾಲಿಸ್ತಾನ್ ಧ್ವಜದ ಜೊತೆಗೆ ಪಾಕಿಸ್ತಾನದ ಧ್ವಜವನ್ನೂ ಪ್ರದರ್ಶಿಸಿದ್ದು ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ರ್‍ಯಾಲಿಯ ಸಂದರ್ಭ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿಯನ್ನು ಹೊತ್ತ ಕೆಲವರು `ಕೆನಡಾದ ಪ್ರಜೆಗಳನ್ನು ಕೊಂದವರು ಯಾರು ? ಭಾರತ ಸರ್ಕಾರ' ಎಂದು ಘೋಷಣೆ ಕೂಗುತ್ತಿದ್ದರು. ರ್ಯಾಲಿಯ ವರದಿ ಮಾಡುತ್ತಿದ್ದ ತನ್ನ ಮೇಲೆ ಗುಂಪು ಹಲ್ಲೆ ನಡೆಸಿ ಫೋನನ್ನು ಕಸಿದುಕೊಂಡಿದೆ ಎಂದು ಕೆನಡಾ ಮೂಲದ ಪತ್ರಕರ್ತ ಮೋಚ ಬೆಝಿರ್ಗನ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News