×
Ad

ಲಂಡನ್: ಫೆಲೆಸ್ತೀನ್ ಪರ ಬೃಹತ್ ಪ್ರತಿಭಟನೆ

Update: 2023-11-13 00:33 IST

Photo : twitter

ಲಂಡನ್ : ಲಂಡನ್ನಲ್ಲಿ ಶನಿವಾರ ನಡೆದ ಫೆಲೆಸ್ತೀನ್ ಪರ ಪ್ರತಿಭಟನಾ ರ‍್ಯಾಲಿಯಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಇದೇ ಸಂದರ್ಭ ರ‍್ಯಾಲಿಯನ್ನು ತಡೆಯಲು ಬಲಪಂಥೀಯ ಸಂಘಟನೆಗಳು ಪ್ರಯತ್ನಿಸಿದಾಗ ಹಿಂಸಾಚಾರ ನಡೆದಿದೆ ಎಂದು ವರದಿಯಾಗಿದೆ.

ಹಿಂಸಾಚಾರಕ್ಕೆ ಸಂಬಂಧಿಸಿ 120ಕ್ಕೂ ಅಧಿಕ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲನೆಯ ಮಹಾಯುದ್ಧ ಅಂತ್ಯಗೊಂಡ ವಾರ್ಷಿಕ ದಿನಾಚರಣೆಯಂದು ನಡೆದ ಫೆಲೆಸ್ತೀನ್ ಪರ ಪ್ರತಿಭಟನಾ ರ‍್ಯಾಲಿಗೆ ಅಡ್ಡಿಪಡಿಸಲು ಬಲಪಂಥೀಯ ಗುಂಪುಗಳು ಪ್ರಯತ್ನಿಸಿದಾಗ ಅವರನ್ನು ಪೊಲೀಸರು ತಡೆದರು. ಆಗ ಮಾತಿನ ಚಕಮಕಿ ಮತ್ತು ಘರ್ಷಣೆ ನಡೆದಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News