×
Ad

2200 ಮಂದಿ ಮೃತಪಟ್ಟ ಬಳಿಕ ಅಫ್ಘಾನಿಸ್ತಾನದಲ್ಲಿ 5.0 ತೀವ್ರತೆಯ ಮತ್ತೊಂದು ಭೂಕಂಪ

Update: 2025-09-06 13:58 IST

Photo: AP/PTI

ಕಾಬೂಲ್: ಭೀಕರ ಭೂಕಂಪ ಅಫ್ಘಾನಿಸ್ತಾನದಲ್ಲಿ 2200 ಮಂದಿಯನ್ನು ಬಲಿಪಡೆದ ಕೆಲವೇ ದಿನಗಳಲ್ಲಿ 5.0 ತೀವ್ರತೆಯ ಮತ್ತೊಂದು ಭೂಕಂಪ ದೇಶವನ್ನು ಕಂಗೆಡಿಸಿದೆ.

ರಾಷ್ಟ್ರೀಯ ಭೂಕಂಪಮಾಪನ ಕೇಂದ್ರದ ಪ್ರಕಾರ, ಮಧ್ಯಾಹ್ನ 1.55ಕ್ಕೆ ಈ ಭೂಕಂಪ ಸಂಭವಿಸಿದ್ದು, ಕಾಬೂಲ್ ನಿಂದ 110 ಕಿಲೋಮೀಟರ್ ಪೂರ್ವದಲ್ಲಿ ಈ ವಿಕೋಪ ಸಂಭವಿಸಿದೆ. ಇದಕ್ಕೂ ಮುನ್ನ ಶುಕ್ರವಾರ ಮುಂಜಾನೆ 5.2, 4.6 ಮತ್ತು 4.5 ತೀವ್ರತೆಯ ಮೂರು ಭೂಕಂಪನಗಳು ಬೇರೆ ಬೇರೆ ಅವಧಿಯಲ್ಲಿ ಸಂಭವಿಸಿದ್ದವು. ಕಳೆದ ರವಿವಾರ ಸಂಭವಿಸಿದ ಭೂಕಂಪದಲ್ಲಿ 2200ಕ್ಕೂ ಹೆಚ್ಚು ಮಂದಿ ಮೃತಪಟ್ಟ ಬೆನ್ನಲ್ಲೇ ಮತ್ತೆ ಸರಣಿ ಭೂಕಂಪ ಸಂಭವಿಸಿದೆ.

ನೆಲಸಮವಾದ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ನೂರಾರು ಮೃತದೇಹಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ 2200 ದಾಟಿದೆ ಎಂದು ತಾಲಿಬಾನ್ ಅಧಿಕಾರಿಗಳು ಹೇಳಿದ್ದಾರೆ. ರವಿವಾರ ಸಂಭವಿಸಿದ ಭೂಕಂಪದಲ್ಲಿ ಇಡೀ ಗ್ರಾಮಗಳೇ ನೆಲಸಮವಾಗಿದ್ದು, ನೂರಾರು ಮಂದಿ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದಾರೆ.

ಬೆಟ್ಟಪ್ರದೇಶ ಹಾಗೂ ನದಿ ಕಣಿವೆಯನ್ನು ಹೊಂದಿರುವ ಕುನಾರ್ ಪ್ರದೇಶದಲ್ಲಿ ಬಹುತೇಕ ಹಾನಿ ಸಂಭವಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News