ಅಮೆರಿಕದ ಪ್ರತಿಷ್ಠಿತ Purdue ಯೂನಿವರ್ಸಿಟಿಯ ತಜ್ಞರೊಂದಿಗೆ ಸಚಿವ ಯುಟಿ ಖಾದರ್ ಸಮಾಲೋಚನೆ

ಕರ್ನಾಟಕದ ಆಹಾರ ಸುರಕ್ಷತೆಗೆ ಹೊಸ ನಿಯಮ

Update: 2026-07-28 19:58 IST

ಮಂಗಳೂರು: ಆಹಾರ ಸುರಕ್ಷತೆ ಹಾಗೂ ಗುಣಮಟ್ಟದ ಆಹಾರ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಸಚಿವ ಯು ಟಿ ಖಾದರ್ ಅವರು ಅಮೆರಿಕದ ವಿಶ್ವಪ್ರಸಿದ್ಧ ಪರ್ಡ್ಯೂ (Purdue) ಯೂನಿವರ್ಸಿಟಿಯ Department of Food Scienceಗೆ ಭೇಟಿ ನೀಡಿ ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು.

ಇತ್ತೀಚಿನ ದಿನಗಳಲ್ಲಿ ಅಸುರಕ್ಷಿತ ಹಾಗೂ ಅಸಮರ್ಪಕ ಆಹಾರ ತಯಾರಿಕೆಯಿಂದ ಉಂಟಾಗುವ ಅನಾರೋಗ್ಯದ ಬಗ್ಗೆ ಯುಟಿ ಖಾದರ್ ಅವರು ಕಳವಳ ವ್ಯಕ್ತಪಡಿಸಿದರು.

ಸುರಕ್ಷಿತ ಮತ್ತು ಗುಣಮಟ್ಟದ ಆಹಾರ ತಯಾರಿಕೆಗೆ ಅನುಸರಿಸಬೇಕಾದ ವೈಜ್ಞಾನಿಕ ವಿಧಾನಗಳು, ಆಧುನಿಕ ತಂತ್ರಜ್ಞಾನಗಳು ಹಾಗೂ ಕಟ್ಟುನಿಟ್ಟಿನ ಆಹಾರ ಸುರಕ್ಷತಾ ಮಾನದಂಡಗಳ ಕುರಿತು ಚರ್ಚಿಸಿದರು.

ಈ ಭೇಟಿಯು ಕರ್ನಾಟಕದ ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಆಹಾರ ಸುರಕ್ಷತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಅಂತರರಾಷ್ಟ್ರೀಯ ಮಟ್ಟದ ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.



 


 


 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News