ರಶ್ಯ : ಉಕ್ರೇನ್ ದಾಳಿಯಲ್ಲಿ ಮಗು ಸೇರಿ ಐವರು ಮೃತ್ಯು

Update: 2026-07-27 21:31 IST

Photo Credit ; AP 

 ಮಾಸ್ಕೊ, ಜು.27: ಸೋಮವಾರ ಬೆಳಗ್ಗೆ ರಶ್ಯದ ಮೇಲೆ ಉಕ್ರೇನ್ ಸರಣಿ ಡ್ರೋನ್ ದಾಳಿ ನಡೆಸಿದ್ದು ದಂಪತಿ, ಮಗು ಸೇರಿದಂತೆ ಐದು ಜನರು ಸಾವನ್ನಪ್ಪಿದ್ದಾರೆ. ಈ ದಾಳಿಯಿಂದಾಗಿ ವಸತಿ ಸಮುಚ್ಚಯ ಮತ್ತು ಗೋದಾಮುಗಳು ಸೇರಿದಂತೆ ಹಲವು ಕಟ್ಟಡಗಳು ಬೆಂಕಿಗೆ ಆಹುತಿಯಾಗಿವೆ ಎಂದು ರಶ್ಯದ ಅಧಿಕಾರಿಗಳು ತಿಳಿಸಿದ್ದಾರೆ.

ಸಾವನ್ನಪ್ಪಿದ ಐದೂ ಜನರು ಉಕ್ರೇನ್ ಗಡಿಗೆ ಹೊಂದಿಕೊಂಡಿರುವ ರಶ್ಯದ ರೋಸ್ಟೊವ್ ಪ್ರದೇಶದವರೆಂದು ವರದಿಯಾಗಿದೆ.

ದಾಳಿಯಿಂದಾಗಿ ನಿರಾಶ್ರಿತರ ರಕ್ಷಣೆ ನೀಡುವ ಕೇಂದ್ರ ಸೇರಿದಂತೆ ಹಲವು ಕಟ್ಟಡಗಳಿಗೆ ಹಾನಿಯಾಗಿದೆ. ಪ್ರತ್ಯೇಕ ಘಟನೆಯಲ್ಲಿ

ಉಕ್ರೇನ್‍ಗೆ ಹೊಂದಿಕೊಂಡಿರುವ ಬೆಲ್ಗೊರೊಡ್ ಪ್ರದೇಶದಲ್ಲಿ, ಉಕ್ರೇನ್‍ನ ಡ್ರೋನ್ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ 12 ಜನರು ಗಾಯಗೊಂಡಿದ್ದು ವಸತಿ ಕಟ್ಟಡವೊಂದರಲ್ಲಿ ಬೆಂಕಿ ಹರಡಿದೆ ಎಂದು ಪ್ರಾದೇಶಿಕ ಅಧಿಕಾರಿಗಳು ತಿಳಿಸಿದ್ದಾರೆ.

ರಶ್ಯದ ವಾಯು ರಕ್ಷಣಾ ವ್ಯವಸ್ಥೆಯು 276 ಡ್ರೋನ್‍ಗಳನ್ನು ಹೊಡೆದುರುಳಿಸಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News