ಕೆನಡಾ: ಭಾರತೀಯ ಮೂಲದ ಯುವತಿಯ ಗುಂಡಿಕ್ಕಿ ಹತ್ಯೆ; ಆರೋಪಿಯ ಬಂಧನ

Update: 2026-07-27 21:28 IST

ನವನೀತ್ ಕೌರ್ | Photo : (Toronto Police Service)

ಟೊರೊಂಟೊ, ಜು.27: ಕೆನಡಾದ ಟೊರೊಂಟೊ ನಗರದಲ್ಲಿ 26 ವರ್ಷದ ಭಾರತೀಯ ಮೂಲದ ಯುವತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಶಂಕಿತ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಸಂತ್ರಸ್ತೆ ನವನೀತ್ ಕೌರ್ ಅವರು ಹಂಬರ್‍ವುಡ್ ಬೌಲೆವರ್ಡ್ ರಸ್ತೆಯಲ್ಲಿ ಪೂರ್ವದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಒಬ್ಬ ವ್ಯಕ್ತಿ ಅವರನ್ನು ಹಿಂಬಾಲಿಸಿಕೊಂಡು ಬಂದು ಕರೆದಿದ್ದಾನೆ. ನವನೀತ್ ಅವರು ಹಿಂತಿರುಗಿ ನೋಡಿದಾಗ, ಆ ವ್ಯಕ್ತಿ ಅವರ ಮೇಲೆ ಒಮ್ಮೆ ಗುಂಡು ಹಾರಿಸಿ ಆಯುಧದೊಂದಿಗೆ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಯನ್ನು ಉಲ್ಲೇಖಿಸಿ ಸಿಬಿಎಸ್ ನ್ಯೂಸ್ ವರದಿ ಮಾಡಿದೆ.

ಡ್ರೋನ್‍ಗಳು ಮತ್ತು ಶ್ವಾನ ದಳ ಪಡೆಗಳನ್ನು ಬಳಸಿ ನಡೆಸಿದ ಕಾರ್ಯಾಚರಣೆಯಲ್ಲಿ ಬ್ರಾಂಪ್ಟನ್ ಮೂಲದ ಶರಣ್‍ಜಿತ್ ಸಿಂಗ್ (37) ಎಂಬಾತನನ್ನು ಬಂಧಿಸಲಾಗಿದೆ. ಈ ಕೊಲೆಯು `ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ನಡೆಸಿದ ದಾಳಿ' ಎಂದು ನಂಬಲಾಗಿದ್ದು, ಈ ಪ್ರಕರಣದಲ್ಲಿ ಬೇರೆ ಯಾವುದೇ ಶಂಕಿತರು ಪಾಲ್ಗೊಂಡಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News