ನಿವೃತ್ತಿ ಘೋಷಿಸಿದ ನಾಸಾ ಗಗನಯಾತ್ರಿ ಬುಚ್ ವಿಲ್ಮೋರ್
Update: 2025-08-07 22:58 IST
Photo : NASA
ವಾಷಿಂಗ್ಟನ್, ಆ.7: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ನಾಸಾ)ಯಲ್ಲಿ 25 ವರ್ಷ ಕೆಲಸ ಮಾಡಿರುವ ನಾಸಾ ಗಗನಯಾತ್ರಿ ಬುಚ್ ವಿಲ್ಮೋರ್ ನಿವೃತ್ತಿ ಘೋಷಿಸಿರುವುದಾಗಿ ವರದಿಯಾಗಿದೆ.
ಅಮೆರಿಕ ನೌಕಾದಳದಲ್ಲಿ ಟೆಸ್ಟ್ ಪೈಲಟ್ ಆಗಿ ವೃತ್ತಿಜೀವನ ಆರಂಭಿಸಿದ್ದ 62 ವರ್ಷದ ವಿಲ್ಮೋರ್ ಬಳಿಕ ಗಗನಯಾತ್ರಿಯಾಗಿದ್ದರು.
2024ರ ಜೂನ್ 5ರಂದು 8 ದಿನಗಳ ಕಾರ್ಯಕ್ರಮದಡಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ್ದ ನಾಸಾದ ಗಗನಯಾತ್ರಿಗಳಾದ ವಿಲ್ಮೋರ್ ಹಾಗೂ ಸುನೀತಾ ವಿಲಿಯಮ್ಸ್ ತಾಂತ್ರಿಕ ಸಮಸ್ಯೆಯ ಕಾರಣ ಅಲ್ಲಿ 9 ತಿಂಗಳಿಗೂ ಹೆಚ್ಚು ಕಾಲ ಉಳಿಯುವಂತಾಗಿತ್ತು. ಬಳಿಕ 2025ರ ಮಾರ್ಚ್‌ನಲ್ಲಿ ಇವರಿಬ್ಬರು ಭೂಮಿಗೆ ಹಿಂತಿರುಗಿದ್ದರು.