Photo Credit : PTI 

ಕಠ್ಮಂಡು: ಟಿಬೆಟ್-ನೇಪಾಳ ಗಡಿಯಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ಶನಿವಾರ 1,344ಕ್ಕೆ ಏರಿಕೆಯಾಗಿದೆ. ಶನಿವಾರ ಮತ್ತಷ್ಟು ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈಗಲೂ ಸಾವಿರಾರು ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನೇಪಾಳ ಪೊಲೀಸರು ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ಒಟ್ಟು 843 ಮೃತದೇಹಗಳು ಪತ್ತೆಯಾಗಿದೆ. ಈ ಪೈಕಿ 758 ಮಂದಿ ವಯಸ್ಕರು ಹಾಗೂ 85 ಮಕ್ಕಳ ಮೃತದೇಹಗಳು ಸೇರಿವೆ.

ಪ್ರವಾಹ ಪೀಡಿತ ಪ್ರದೇಶಗಳಿಂದ ಛಿದ್ರವಾಗಿರುವ 501 ಮೃತದೇಹಗಳನ್ನೂ ವಶಪಡಿಸಿಕೊಳ‍್ಳಲಾಗಿದೆ ಎಂದು ಪ್ರಾಧಿಕಾರಗಳು ವರದಿ ಮಾಡಿವೆ.

ಆಗಸ್ಟ್ 26ರಂದು ಟಿಬೆಟ್-ನೇಪಾಳ ಗಡಿಯಲ್ಲಿ ಹಿಮನದಿಯೊಂದು ಹಠಾತ್ ಆಗಿ ಸ್ಫೋಟಗೊಂಡ ಪರಿಣಾಮ ನೇಪಾಳದಲ್ಲಿ ದಿಢೀರ್ ಪ್ರವಾಹ ಸಂಭವಿಸಿತ್ತು. ಈ ಪ್ರವಾಹದಲ್ಲಿ ಉತ್ತರ ಮತ್ತು ಕೇಂದ್ರ ನೇಪಾಳದ ಗ್ರಾಮಗಳು ಹಾಗೂ ಪಟ್ಟಣಗಳು ಸಂಪೂರ್ಣವಾಗಿ ನಾಶಗೊಂಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor