×
Ad

ನ್ಯೂಯಾರ್ಕ್ | ಕಾರ್ಯಕ್ರಮಗಳನ್ನು ರೂಪಿಸಲು ಸರ್ವ-ಮಹಿಳೆಯರ ತಂಡ ರಚಿಸಿದ ಮಮ್ದಾನಿ

‘ಜನರ ನಂಬಿಕೆಯನ್ನು ಉಳಿಸಲು ಪ್ರತಿ ದಿನ ಕೆಲಸ ಮಾಡುವೆ’

Update: 2025-11-06 21:02 IST

ರೊಹ್ರಾನ್ ಮಮ್ದಾನಿ | Photo Credit : AP \ PTI 

ನ್ಯೂಯಾರ್ಕ್, ನ. 6: ನ್ಯೂಯಾರ್ಕ್ ಮೇಯರ್ ಆಗಿ ನಾನು ಮಾಡಬೇಕಾಗಿರುವ ಕೆಲಸಗಳನ್ನು ನಿರ್ಧರಿಸಲು ನ್ಯೂಯಾರ್ಕ್ ಮತ್ತು ಕೇಂದ್ರ ಸರಕಾರದ ಮಾಜಿ ಅಧಿಕಾರಿಗಳನ್ನು ಒಳಗೊಂಡ ಸರ್ವ ಮಹಿಳೆಯರ ತಂಡವೊಂದನ್ನು ರಚಿಸಲಾಗಿದೆ ಎಂದು ನಗರದ ನೂತನ ಮೇಯರ್ ಆಗಿ ಆಯ್ಕೆಯಾಗಿರುವ ರೊಹ್ರಾನ್ ಮಮ್ದಾನಿ ಬುಧವಾರ ಘೋಷಿಸಿದ್ದಾರೆ.

ಅದೇ ವೇಳೆ, ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಗೌರವಿಸಲು ನಾನು ಪ್ರತಿದಿನ ಕೆಲಸ ಮಾಡುತ್ತೇನೆ ಎಂಬುದಾಗಿಯೂ ಅವರು ಹೇಳಿದ್ದಾರೆ.

‘‘ಚುನಾವಣೆಯಲ್ಲಿ ನಾವು ನೀಡಿರುವ ಭರವಸೆಗಳನ್ನು ಈಡೇರಿಸಲು ಸಮರ್ಥವಾಗುವ ಆಡಳಿತ ವ್ಯವಸ್ಥೆಯನ್ನು ನಾನು ಮತ್ತು ನನ್ನ ತಂಡ ರಚಿಸುತ್ತೇವೆ’’ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿಯೋಜಿತ ಮೇಯರ್ ಹೇಳಿದರು.

ರಾಜಕೀಯ ತಂತ್ರಗಾರ್ತಿ ಎಲಾನಾ ಲೆಪೋಲ್ಡ್ ತನ್ನ ತಂಡದ ಕಾರ್ಯನಿರ್ವಾಹಕ ನಿರ್ದೇಶಕರಾಗಿರುತ್ತಾರೆ ಎಂದು ಅವರು ಪ್ರಕಟಿಸಿದರು. ತಂಡದಲ್ಲಿ ಯುನೈಟೆಡ್ ವೇ ಆಫ್ ನ್ಯೂಯಾರ್ಕ್ ಸಿಟಿ ಅಧ್ಯಕ್ಷೆ ಗ್ರೇಸ್ ಬೊನಿಲಾ, ಮಾಜಿ ಉಪ ಮೇಯರ್ ಮೆಲಾನೀ ಹ್ಯಾರೆರ್ಗ್, ಮಾಜಿ ಫೆಡರಲ್ ವ್ಯಾಪಾರ ಆಯೋಗದ ಅಧ್ಯಕ್ಷೆ ಲೀನಾ ಖಾನ್ ಮತ್ತು ಮಾಜಿ ಪ್ರಥಮ ಉಪ ಮೇಯರ್ ಮರಿಯಾ ಟೊರಿಸ್ ಸ್ಪ್ರಿಂಗರ್ ಇರುತ್ತಾರೆ.

ಮೇಯರ್ ಚುನಾವಣೆಯಲ್ಲಿ, ಡೆಮಾಕ್ರಟಿಕ್ ಪಕ್ಷದ 34 ವರ್ಷದ ಅಭ್ಯರ್ಥಿ ಮಮ್ದಾನಿ ತನ್ನದೇ ಪಕ್ಷದ, ಮಾಜಿ ಗವರ್ನರ್ ಆ್ಯಂಡ್ರೂ ಕುವೋಮೊ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಕರ್ಟಿಸ್ ಸ್ಲೈವ ಅವರನ್ನು ಸೋಲಿಸಿದ್ದಾರೆ. ಇದರೊಂದಿಗೆ ಅವರು ನಗರದ ಮೊದಲ ಮುಸ್ಲಿಮ್ ಮೇಯರ್ ಆಗಲಿದ್ದಾರೆ.

‘‘ಕಳೆದ ವರ್ಷ ನಾವು ಅನುಸರಿಸಿದ ನೀತಿಗಳನ್ನೇ ಮುಂದುವರಿಸುವ ಬಗ್ಗೆ ನನಗೆ ಭರವಸೆಯಿದೆ’’ ಎಂದು ಸಂದರ್ಶನವೊಂದರಲ್ಲಿ ಮಮ್ದಾನಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News