ಪಾಕ್ ಮೇಲೆ ಭಾರತ ದಾಳಿ ಮಾಡಿದರೆ ಜಗತ್ತಿನ ಅಂತ್ಯವಾಗುತ್ತದೆ: ಪಾಕ್ ರಕ್ಷಣಾ ಸಚಿವ
Update: 2025-05-06 22:04 IST
ಖವಾಜಾ ಆಸಿಫ್ | PC : PTI
ಇಸ್ಲಾಮಾ ಬಾದ್: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ- ಪಾಕ್ ನಡುವಿನ ಉದ್ವಿಗ್ನತೆ ಪರಾಕಾಷ್ಠೆಗೆ ತಲುಪಿರುವ ನಡುವೆಯೇ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಮತ್ತೊಂದು ಬೆದರಿಕೆಯ ಹೇಳಿಕೆ ನೀಡಿದ್ದು ಒಂದು ವೇಳೆ ಭಾರತವು ಪಾಕ್ ಮೇಲೆ ದಾಳಿ ನಡೆಸುವ ಧೈರ್ಯ ತೋರಿದರೆ ಜಗತ್ತಿನ ಅಂತ್ಯವಾಗಲಿದೆ ಎಂದಿದ್ದಾರೆ.
ಒಂದು ವೇಳೆ ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸುವ ಧೈರ್ಯ ಮಾಡಿದರೆ ಮತ್ತು ಪಾಕಿಸ್ತಾನದ ಅಸ್ತಿತ್ವಕ್ಕೆ ಬೆದರಿಕೆ ಎದುರಾದರೆ ಈ ಜಗತ್ತಿನಲ್ಲಿ ಯಾರೂ ಉಳಿಯುವುದಿಲ್ಲ ಎಂದು ಆಸಿಫ್ ಹೇಳಿದ್ದು ಪರಿಸ್ಥಿತಿಯನ್ನು ಗಾಝಾದಲ್ಲಿ ಇಸ್ರೇಲ್‍ನ ಮಿಲಿಟರಿ ಕಾರ್ಯಾಚರಣೆಗೆ ಹೋಲಿಸಿದ್ದಾರೆ.
ಭಾರತವು ಜಮ್ಮು-ಕಾಶ್ಮೀರದ ಎಲ್‍ಒಸಿ ಬಳಿ ಯಾವುದೇ ಕ್ಷಣದಲ್ಲಿ ಮಿಲಿಟರಿ ಕಾರ್ಯಾಚರಣೆ ಆರಂಭಿಸಬಹುದು ಎಂಬ ವರದಿ ಲಭಿಸಿದೆ. ದಾಳಿ ಮಾಡಿದರೆ ಭಾರತಕ್ಕೆ ಸೂಕ್ತ ಪ್ರತ್ಯುತ್ತರ ನೀಡಲಾಗುವುದು ಎಂದು ಆಸಿಫ್ ಎಚ್ಚರಿಕೆ ನೀಡಿದ್ದಾರೆ.