ಮತ್ತೊಂದು ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ನಡೆಸಿದ ಪಾಕಿಸ್ತಾನ
Update: 2025-05-05 23:47 IST
ಇಸ್ಲಮಾಬಾದ್: ಪಾಕಿಸ್ತಾನ ಸೇನೆಯು ಸೋಮವಾರ ಮತ್ತೊಂದು ಬ್ಯಾಲಿಸ್ಟಿಕ್ ಕ್ಷಿಪಣಿಯ ಪರೀಕ್ಷೆ ನಡೆಸಿರುವುದಾಗಿ ವರದಿಯಾಗಿದೆ.
ಶನಿವಾರ 450 ಕಿ.ಮೀ ವ್ಯಾಪ್ತಿಯ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ನಡೆಸಿದ ಬೆನ್ನಲ್ಲೇ ಸೋಮವಾರ 120 ಕಿ.ಮೀ ವ್ಯಾಪ್ತಿಯ ಮತ್ತೊಂದು ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಗೌಪ್ಯ ಸ್ಥಳದಲ್ಲಿ ಪರೀಕ್ಷೆ ನಡೆಸಿರುವುದಾಗಿ ಪಾಕಿಸ್ತಾನದ ಸೇನೆ ಹೇಳಿಕೊಂಡಿದೆ. ಕ್ಷಿಪಣಿ ಉಡಾವಣೆಯು ಸೈನಿಕರ ಕಾರ್ಯಾಚರಣೆಯ ಸಿದ್ಧತೆಯನ್ನು ಖಾತರಿಪಡಿಸುವುದು ಮತ್ತು ಕ್ಷಿಪಣಿಯ ಪ್ರಮುಖ ತಾಂತ್ರಿಕ ನಿಯತಾಂಕಗಳನ್ನು ಮೌಲ್ವೀಕರಿಸುವ ಗುರಿಯನ್ನು ಹೊಂದಿದೆ ಎಂದು ಪಾಕಿಸ್ತಾನದ ಮಿಲಿಟರಿ ಹೇಳಿದೆ.
ರಾಷ್ಟ್ರೀಯ ರಕ್ಷಣೆಗೆ ಮಿಲಿಟರಿಯ ಸಂಪೂರ್ಣ ಸಿದ್ಧತೆಯ ಬಗ್ಗೆ ತೃಪ್ತಿಯಿದೆ. ಪಾಕಿಸ್ತಾನದ ರಕ್ಷಣೆಯು ಬಲಿಷ್ಟ ಕೈಯಲ್ಲಿರುವುದನ್ನು ಯಶಸ್ವಿ ಕ್ಷಿಪಣಿ ಪರೀಕ್ಷೆಯು ಸಾಬೀತುಪಡಿಸಿದೆ ಎಂದು ಪಾಕ್ ಪ್ರಧಾನಿ ಶಹಬಾಝ್ ಷರೀಫ್ ಪ್ರತಿಕ್ರಿಯಿಸಿರುವುದಾಗಿ ವರದಿಯಾಗಿದೆ.