×
Ad

ಪಾಕಿಸ್ತಾನ: 1 ಲೀಟರ್ ಪೆಟ್ರೋಲ್ ಬೆಲೆ 275.62 ರೂ.ಗೆ ಏರಿಕೆ

Update: 2024-02-16 22:46 IST

ಇಸ್ಲಮಾಬಾದ್: ಪಾಕಿಸ್ತಾನದ ಉಸ್ತುವಾರಿ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿದ್ದು ಹೊಸ ದರ ಫೆಬ್ರವರಿ 16ರ ಮಧ್ಯರಾತ್ರಿಯಿಂದ ಜಾರಿಗೆ ಬರುತ್ತದೆ ಎಂದು ವರದಿಯಾಗಿದೆ.

ಪೆಟ್ರೋಲ್ ಬೆಲೆಯಲ್ಲಿ ಪ್ರತೀ ಲೀಟರ್ ಗೆ 2.73 ರೂ. ಏರಿಕೆಯಾಗಿದ್ದು ಲೀಟರ್ ಪೆಟ್ರೋಲ್ ದರ 275.62 ಪಾಕ್ ರೂ.ಗೆ ತಲುಪಿದೆ. (ಪಾಕಿಸ್ತಾನದ 3.36 ರೂ. ಭಾರತದ 1 ರೂಗೆ ಸಮ). ಇದೇ ವೇಳೆ ಹೈಸ್ಪೀಡ್ ಡೀಸೆಲ್ ಬೆಲೆ ಲೀಟರ್‌ ಗೆ 8.37 ರೂ. ಹೆಚ್ಚಿದ್ದು ಪ್ರತೀ ಲೀಟರ್‌ ಗೆ 287.33 ಪಾಕ್ ರೂ.ಗೆ ತಲುಪಿದೆ. ತೈಲ ಮತ್ತು ಅನಿಲ ನಿಯಂತ್ರಣ ಪ್ರಾಧಿಕಾರ(ಓಜಿಆರ್‍ಎ)ದ ಶಿಫಾರಸಿನಂತೆ ಬೆಲೆ ಹೆಚ್ಚಳ ಮಾಡಿದ್ದು ಫೆಬ್ರವರಿ 29ರವರೆಗೆ ಈ ಪರಿಷ್ಕøತ ದರ ಚಾಲ್ತಿಯಲ್ಲಿರುತ್ತದೆ ಎಂದು ಉನ್ನತ ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News