×
Ad

ಭಾರತೊಂದಿಗಿನ ಯುದ್ಧದಲ್ಲಿ ಪಾಕ್‍ ಗೆ `ಐತಿಹಾಸಿಕ ಗೆಲುವು': ಸ್ವಾತಂತ್ರ್ಯ ದಿನದ ಸಂದೇಶದಲ್ಲಿ ಪಾಕ್ ಪ್ರಧಾನಿ ಶರೀಫ್

Update: 2025-08-14 21:28 IST

 ಶಹಬಾಝ್ ಷರೀಫ್|PC : PTI

ಇಸ್ಲಮಾಬಾದ್, ಆ.14: ನಮ್ಮ ಯೋಧರ ಶೌರ್ಯ, ಪರಾಕ್ರಮದಿಂದ ಇತ್ತೀಚೆಗೆ ಭಾರತದೊಂದಿಗಿನ ಗಡಿ ಸಂಘರ್ಷದಲ್ಲಿ ಪಾಕಿಸ್ತಾನ ಐತಿಹಾಸಿಕ ಗೆಲುವು ಸಾಧಿಸಿದೆ ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಝ್ ಷರೀಫ್ ಪ್ರತಿಪಾದಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ದೇಶದ ಜನತೆಗೆ ನೀಡಿರುವ ಸಂದೇಶದಲ್ಲಿ ಷರೀಫ್ `ಎರಡು ರಾಷ್ಟ್ರಗಳ' ಸಿದ್ಧಾಂತವನ್ನು ಉಲ್ಲೇಖಿಸಿದರು. `ನಮ್ಮ ಮೇಲೆ ಭಾರತ ಹೇರಿದ ನಾಲ್ಕು ದಿನದ ಯುದ್ಧದಲ್ಲಿ ಪಾಕಿಸ್ತಾನದ ಐತಿಹಾಸಿಕ ಗೆಲುವು ನಮ್ಮ ಸ್ವಾತಂತ್ರ್ಯದ ಪಾವಿತ್ರ್ಯವನ್ನು ಬಲಪಡಿಸುವುದಲ್ಲದೆ ನಮ್ಮ ಜನರ ಹೃದಯದಲ್ಲಿ ಮಹಾತ್ವಾಕಾಂಕ್ಷೆ ಮತ್ತು ರಾಷ್ಟ್ರೀಯ ಮನೋಭಾವದ ಹೊಸ ಪ್ರಜ್ಞೆಯನ್ನು ಹುಟ್ಟುಹಾಕಿದೆ. ಈ ಸ್ವಾತಂತ್ರ್ಯ ದಿನದ ಹೆಮ್ಮೆ ಮತ್ತು ಉತ್ಸಾಹವನ್ನು ವರ್ಧಿಸುತ್ತದೆ' ಎಂದು ಅವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News