ಪೋರ್ಚುಗಲ್: ಕೇಬಲ್ ರೈಲು ಅಪಘಾತದಲ್ಲಿ ಕನಿಷ್ಠ 17 ಮೃತ್ಯು
Update: 2025-09-04 20:18 IST
PC : X
ಲಿಸ್ಬನ್, ಸೆ.4: ಪೋರ್ಚುಗಲ್ ನ ಲಿಸ್ಬನ್ ನಗರದಲ್ಲಿ ಕೇಬಲ್ ರೈಲು ಅಪಘಾತಕ್ಕೀಡಾಗಿ ಕನಿಷ್ಠ 17 ಮಂದಿ ಸಾವನ್ನಪ್ಪಿದ್ದು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಪ್ರವಾಸಿಗರ ಆಕರ್ಷಣೆಯಾಗಿರುವ ಗ್ಲೋರಿಯಾ ರೈಲ್ವೇ ಕೇಬಲ್ ಕಾರು ಲಿಬರ್ಟಿ ಅವೆನ್ಯೂ ಪ್ರದೇಶದ ಕೋಬ್ಲ್ ಟ್ಟೋನ್ ರಸ್ತೆಯ ಬಳಿ ಹಳಿತಪ್ಪಿ ಕಟ್ಟಡವೊಂದರ ಮೇಲೆ ಬಿದ್ದಿದೆ. ಮೃತರಲ್ಲಿ ವಿದೇಶಿ ಪ್ರಜೆಗಳೂ ಸೇರಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಕೇಬಲ್ ಕಾರಿನ ಬ್ರೇಕ್ ವ್ಯವಸ್ಥೆಯ ವೈಫಲ್ಯವು ಅಪಘಾತಕ್ಕೆ ಕಾರಣವಾಗಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ ಎಂದು ಲಿಸ್ಬನ್‍ನ ಮೇಯರ್ ಕಾರ್ಲೋಸ್ ಮೊಯೆಡಸ್ ಹೇಳಿದ್ದಾರೆ.