ಸದ್ಯದಲ್ಲೇ ಕೆಲವು ವಿದೇಶಿ ಒತ್ತೆಯಾಳುಗಳ ಬಿಡುಗಡೆ: ಹಮಾಸ್ ನಿರ್ಧಾರ
Photo- PTI
ಗಾಝಾ: ಮುಂಬರುವ ದಿನಗಳಲ್ಲಿ ತನ್ನ ವಶದಲ್ಲಿರುವ ಕೆಲವು ವಿದೇಶಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವುದಾಗಿ ಹಮಾಸ್‌ನ ಸೇನಾ ದಳವು ಮಂಗಳವಾರ ಘೋಷಿಸಿದೆ.
‘‘ಮುಂದಿನ ಕೆಲವು ದಿನಗಳಲ್ಲಿ ನಾವು ನಿರ್ದಿಷ್ಟ ಸಂಖ್ಯೆಯ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವುದಾಗಿ ಸಂಧಾನಕಾರರಿಗೆ ತಿಳಿಸಿದ್ದೇವೆ’’ ಎಂದು ಹಮಾಸ್‌ನ ಮಿಲಿಟರಿ ದಳ ಎಝೆದೈನ್ ಅಲ್ ಖಾಸ್ಸಮ್ ಬ್ರಿಗೇಡ್ಸ್‌ನ ವಕ್ತಾರ ಅಬು ಉಬೈದಾ ತಿಳಿಸಿದ್ದಾರೆ.
ಸದ್ಯಕ್ಕೆ ಗಾಝಾದಲ್ಲಿ ಹಮಾಸ್ 240 ಮಂದಿ ಒತ್ತೆಯಾಳುಗಳನ್ನು ಸೆರೆಯಲ್ಲಿರಿಸಿರುವುದಾಗಿ ಭಾವಿಸಲಾಗಿದೆ.ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಗಡಿಪ್ರದೇಶದಲ್ಲಿ ಭೀಕರ ದಾಳಿ ನಡೆಸಿ 240ಕ್ಕೂ ಅಧಿಕ ಮಂದಿಯನ್ನು ಬಂಧಿಸಿ, ಒತ್ತೆಯಾಳುಗಳಾಗಿ ಗಾಝಾಕ್ಕೆ ಕೊಂಡೊಯ್ದಿತ್ತು. ಈವರೆಗೆ ಹಮಾಸ್ ಐವರು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದೆ. ಇವರಲ್ಲಿ ನಾಲ್ವರನ್ನು ಸಂಧಾನ ಮಾತುಕತೆಗಳ ಬಳಿಕ ಬಿಡುಗಡೆಗೊಂಡವರಾಗಿದ್ದಾರೆ ಹಾಗೂ ಇನ್ನೊಬ್ಬರು ಇಸ್ರೇಲ್ ನಡೆಸಿದ ಮಿಲಿಟರಿಕಾರ್ಯಾಚರಮೆಯಲ್ಲಿ ಬಂಧಮುಕ್ತರಾಗಿದ್ದಾರೆ.