×
Ad

ಉಕ್ರೇನ್ ಶಾಂತಿ ಮಾತುಕತೆಗೆ ರಶ್ಯ ಸಿದ್ಧ: ಪುಟಿನ್

Update: 2025-07-20 22:28 IST

ವ್ಲಾದಿಮಿರ್‌‌ ಪುಟಿನ್ | PC : PTI

ಮಾಸ್ಕೋ, ಜು.20: ಉಕ್ರೇನ್ ನಲ್ಲಿ ಶಾಂತಿ ಸ್ಥಾಪನೆಯ ಬಗ್ಗೆ ಮಾತುಕತೆಗೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಸಿದ್ಧರಿದ್ದಾರೆ. ಆದರೆ ನಮ್ಮ ಗುರಿಗಳನ್ನು ಸಾಧಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ರವಿವಾರ ಹೇಳಿದ್ದಾರೆ.

`ಕೆಲವೊಮ್ಮೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡುವ `ಕಠಿಣ ಹೇಳಿಕೆ'ಗೆ ಜಗತ್ತು ಈಗ ಒಗ್ಗಿಕೊಂಡಿದೆ. ಆದರೆ ಅವರೂ ಕೂಡಾ ರಶ್ಯದ ಬಗ್ಗೆ ಪ್ರತಿಕ್ರಿಯಿಸುವಾಗ ಶಾಂತಿ ಒಪ್ಪಂದದ ಪ್ರಯತ್ನ ಮುಂದುವರಿಸುವ ಮಹತ್ವವನ್ನು ಒತ್ತಿಹೇಳಿದ್ದಾರೆ' ಎಂದು ಪೆಸ್ಕೋವ್ ಹೇಳಿದ್ದಾರೆ.

`ಉಕ್ರೇನ್ ವಿಷಯವನ್ನು ಶಾಂತಿಯುತ ರೀತಿಯಲ್ಲಿ ಇತ್ಯರ್ಥ ಪಡಿಸುವ ಆಶಯವನ್ನು ಅಧ್ಯಕ್ಷ ಪುಟಿನ್ ಪದೇ ಪದೇ ವ್ಯಕ್ತಪಡಿಸಿದ್ದಾರೆ. ಇದೊಂದು ಸುದೀರ್ಘ ಪ್ರಕ್ರಿಯೆಯಾಗಿದೆ. ಇದು ಸುಲಭವಲ್ಲ, ಇದಕ್ಕೆ ಇನ್ನಷ್ಟು ಪ್ರಯತ್ನಗಳ ಅಗತ್ಯವಿದೆ. ನಮ್ಮ ಗುರಿಗಳನ್ನು ಸಾಧಿಸುವುದು ನಮಗೆ ಮುಖ್ಯ ವಿಷಯವಾಗಿದೆ. ನಮ್ಮ ಗುರಿಗಳು ಸ್ಪಷ್ಟವಾಗಿವೆ ಎಂದು ಪೆಸ್ಕೋವ್ ಹೇಳಿರುವುದಾಗಿ ವರದಿಯಾಗಿದೆ.

ಉಕ್ರೇನ್‍ ನಲ್ಲಿ ಕದನ ವಿರಾಮ ಒಪ್ಪಂದಕ್ಕೆ 50 ದಿನದೊಳಗೆ ಸಹಿ ಹಾಕದಿದ್ದರೆ ರಶ್ಯ ವಿರುದ್ಧ ಹೆಚ್ಚುವರಿ ನಿರ್ಬಂಧ ಜಾರಿಗೊಳಿಸುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದರು. ಜೊತೆಗೆ, ಉಕ್ರೇನ್ ಗೆ ಪ್ಯಾಟ್ರಿಯಾಟ್ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಸಹಿತ ಹೊಸ ಮಿಲಿಟರಿ ನೆರವು ನೀಡುವುದಾಗಿ ಘೋಷಿಸಿದ್ದರು.

*ಉಕ್ರೇನ್‍ ನ ಮತ್ತೊಂದು ನಗರ ರಶ್ಯ ಪಡೆಗಳ ವಶಕ್ಕೆ: ವರದಿ

ಉಕ್ರೇನ್ನ ಪೂರ್ವದ ಡೊನೆಟ್ಸ್ಕ್ ಪ್ರಾಂತದಲ್ಲಿರುವ ಬಿಲಾ ಹೊರ ನಗರವನ್ನು ರಶ್ಯ ಪಡೆಗಳು ವಶಕ್ಕೆ ಪಡೆದಿರುವುದಾಗಿ ಸರ್ಕಾರಿ ಸ್ವಾಮ್ಯದ ರಿಯಾ ಸುದ್ದಿಸಂಸ್ಥೆ ರವಿವಾರ ವರದಿ ಮಾಡಿದೆ.

ಪೂರ್ವ ಉಕ್ರೇನ್‍ ನ ಆಗ್ನೇಯದಲ್ಲಿರುವ ಪ್ರಮುಖ ಕೈಗಾರಿಕಾ ನಗರ ಕೊಸ್ತಿಯಾಂತಿನಿವ್ಕದ ಸುಮಾರು 12 ಕಿ.ಮೀ ದೂರದಲ್ಲಿರುವ ಬಿಲಾ ಹೊರ ನಗರವನ್ನು ವಶಪಡಿಸಿಕೊಂಡಿರುವ ರಶ್ಯ ಪಡೆಗಳು ಚಸಿವ್ ಯಾರ್ ನಗರದತ್ತ ಮುನ್ನಡೆಯುತ್ತಿವೆ ಎಂದು ರಶ್ಯದ ರಕ್ಷಣಾ ಇಲಾಖೆ ಹೇಳಿಕೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News