×
Ad

ಉಕ್ರೇನ್‌ನ 65 ಯುದ್ಧ ಕೈದಿಗಳಿದ್ದ ರಷ್ಯಾದ ವಿಮಾನ ಪತನ

Update: 2024-01-24 15:32 IST

Screengrab:X/@ndtv

ಕೀವ್: ಉಕ್ರೇನ್‌ನ 65 ಮಂದಿ ಯುದ್ಧ ಕೈದಿಗಳನ್ನು ಸಾಗಿಸುತ್ತಿದ್ದ ರಷ್ಯಾದ ಎಲ್‌-76 ಮಿಲಿಟರಿ ವಿಮಾನವು ರಷ್ಯಾದ ಬೆಲ್ಗೊರೊಡ್‌ ಪ್ರಾಂತ್ಯದಲ್ಲಿ ಉಕ್ರೇನ್‌ ಗಡಿ ಸಮೀಪ ಪತನಗೊಂಡಿದೆ.

ವಿಮಾನವು ನೇರವಾಗಿ ವಸತಿ ಪ್ರದೇಶದ ಸಮೀಪ ಪತನಗೊಂಡು ಹೊತ್ತಿ ಉರಿಯುತ್ತಿರುವುದು ವೀಡಿಯೋವೊಂದರಲ್ಲಿ ಕಾಣಿಸುತ್ತಿದೆ. ವಿಮಾನದ ಬಲಭಾಗದ ರೆಕ್ಕೆ ಮೊದಲು ನೆಲಕ್ಕೆ ಬಡಿದು ನಂತರ ಅದು ಹೊತ್ತಿ ಉರಿದಿದೆ.

ಮಾಸ್ಕೋ ಕಾಲಮಾನ ಬೆಳಿಗ್ಗೆ 11 ಗಂಟೆಗೆ ಸಾಮಾನ್ಯ ಹಾರಾಟದ ವೇಳೆ ಪತನಗೊಂಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ. ವಿಮಾನದಲ್ಲಿ 65 ಉಕ್ರೇನ್‌ ಸೇನಾ ಸಿಬ್ಬಂದಿಗಳ ಹೊರತಾಗಿ ಆರು ವಿಮಾನ ಸಿಬ್ಬಂದಿ ಹಾಗೂ ಮೂವರು ಸಹಾಯಕರಿದ್ದರು ಎಂದು ಸಚಿವಾಲಯ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News